ಚೆನ್ನೈ (ತಮಿಳುನಾಡು): 2 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾದ ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಜೊತೆ ಆದ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಆಸರೆ ಆದರು. ಇದರಿಂದ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ 8.4 ಓವರ್ ಉಳಿಸಿಕೊಂಡು 6 ವಿಕೆಟ್ ಗಳ ಜಯ ಸಾಧಿಸಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 199 ಕ್ಕೆ ಆಲ್ ಔಟ್ ಆಗಿ 200 ರನ್ ಸಾಧಾರಣ ಗುರಿಯನ್ನು ನೀಡಿತ್ತು. 200 ರನ್ ಟಾರ್ಗೆಟ್ ಬೆನ್ನಟಿದ ಭಾರತ ತಂಡ. ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಭಾರತ 5 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಒಂದಾದ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು, ಈ ಜೋಡಿ 165 ರನ್ ಗಳ ಜೊತೆಯಾಟವನ್ನು ಆಡುವ ಮೂಲಕ ಸೋಲಿನ ದವಡೆಯಲ್ಲಿದ್ದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ವೇಳೆ ವಿರಾಟ್ ಕೊಹ್ಲಿ, 116 ಎಸೆತದಲ್ಲಿ 6 ಬೌಂಡರಿ ಮೂಲಕ 85 ರನ್ ಸಿಡಿಸಿ ಕೊನೆ ಹಂತದಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ಹಾರ್ದಿಕ್ ಪಾಂಡ್ಯ ರಾಹುಲ್ ಜೊತೆ ಇನ್ನಿಂಗ್ಸ್ ಕಟ್ಟಿದರು. ಕೆ ಎಲ್ ರಾಹುಲ್ ಶತಕ ಮಾಡುವ ಅವಕಶ ಇತ್ತು ಆದರೆ. 3 ರನ್ ನಿಂದ ಕಳೆದುಕೊಂಡರು. ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸ್ ರಾಹುಲ್ ಶತಕ್ಕೆ ರನ್ ನ ಕೊರತೆ ಮಾಡಿತು. ಆದರೂ ಶತಕ್ಕೆ ರಾಹುಲ್ ಪ್ರಯತ್ನಿಸಿದರು.
ತಂಡದ ಗೆಲುವಿಗೆ ಐದು ರನ್ ಬೇಕಿದ್ದಾಗ ರಾಹುಲ್ ಗೆ ಶತಕಕ್ಕೆ 9 ರನ್ ಬೇಕಿತ್ತು. ರಾಹುಲ್ ಬೌಂಡರಿಗೆ ಪ್ರಯತ್ನಿಸಿದರು ಅದು ಸಿಕ್ಸ್ ಹೋಗಿದ್ದರಿಂದ ಪಂದ್ಯವನ್ನು ಭಾರತ ಗೆದ್ದುಕೊಂಡಿತು. ರಾಹುಲ್ ಅಜೇಯ 97 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 10* ಕಲೆಹಾಕಿದರು. ಭಾರತ 8.4 ಓವರ್ ಉಳಿಸಿಕೊಂಡು 6 ವಿಕೆಟ್ ಗಳ ಜಯ ಸಾಧಿಸಿತ್ತು.