ಮನೆ ಜ್ಯೋತಿಷ್ಯ ಪ್ರಪ್ರಥಮ ಋತುಮತಿ ಫಲ

ಪ್ರಪ್ರಥಮ ಋತುಮತಿ ಫಲ

0

  ಉತ್ರಾಷಾಡ ನಕ್ಷತ್ರದಲ್ಲಿ ಪ್ರಥಮ ಋತುಮತಿಯಾದ ಸ್ತ್ರೀಯಳು ಶುಭಕಾಂಕ್ಷೆಯುಳ್ಳವಳು ಪತಿಗೆ ತಕ್ಕ ಅನುಕೂಲ ಸತಿಯಾಗಿ ತನ್ನ ಕರ್ತವ್ಯವನ್ನು ಅರಿತು ನಡೆದು, ಬಂಧು ಬಳಗದವರೆಲ್ಲರ ಪ್ರೀತಿಗೆ ಪಾತ್ರಳಾಗುವ ಈಕೆ ಸದ್ಗುಣಿಯಾದ ಮಕ್ಕಳನ್ನು ಹೆತ್ತು ಪತಿಗೃಹಕ್ಕೆ ಸಮೃದ್ಧಿಯನ್ನುಂಟು ಮಾಡುವಾಕೆಯು.

Join Our Whatsapp Group

 ಶ್ರವಣಾ ನಕ್ಷತ್ರ ದಲ್ಲಿ ಋತುಮತಿಯದಾಕೆಯು ಧನ ಧಾನ್ಯ ಸಂಪತ್ತು ವಿಶೇಷ ಹೊಂದುವಾಕೆಯು. ಸದ್ಗುಣಿಯಾದ ಮಕ್ಕಳು ಮೊಮ್ಮಕ್ಕಳನ್ನು ಹೊಂದುವಾಕೆಯು, ಒಂದು ವಾಕ್ಯಯು ಬಂದು ಬಳಗದವರಿಗೆ ಆನಂದವನ್ನುಂಟು ಮಾಡುವ ಸದ್ಗುಣಿ ಸ್ವಭಾವ ಈಕೆ ಪತಿ ಭಕ್ತಿ ಪಾರಾಯಣಿಯೂ, ದಾನ ಧರ್ಮ  ಪರೋಪಕಾರಗಳಲ್ಲಿ ಶ್ರೇಷ್ಠ ಯುಳ್ಳವಳೂ ಆಗುವಳು.

   ಧನಿಷ್ಠ ನಕ್ಷತ್ರದಲ್ಲಿ ಪುಷ್ಪವತಿಯಾದ ಸ್ತ್ರೀಯರು ಧನ ಸಮೃದ್ಧಿಯೊಂದಿಗೆ ಸರ್ವ ಸುಖ ಶಾಂತಿ ನೆಮ್ಮದಿಯಿಂದ ಪತಿಭಕ್ತಿಯಿಂದ ಬಾಳುವೆಯನ್ನು ಹೊಂದುವಾಕೆಯು.ಸದ್ಗುಣಿಯೂ,  ವ್ಯವಹಾರ ಚತುರಳೂ ಆದ ಈಕೆ ದೃಢ ಮನಸ್ಸುಳ್ಳಾಕೆಯಾಗುವಳು. ಬಂಧು ಬಳಗದವರ ಕಣ್ಮಣಿಯಾಗಿ ಸಂಸಾರ ಮಾಡುವವಳಾತ್ತಾಳೆ.

 ಶತಾರ ನಕ್ಷತ್ರದಲ್ಲಿ ಋತುಮತಿಯಾದ ಮಹಿಳೆ ಆಯುಷ್ಯವಂತೆಯಾಗುವಲ್ಲದೆ ಸದ್ಗುಣಿಗಳಾದ ಪುತ್ರ ಸಂತಾನವನ್ನು ಹೊಂದುವಳು. ತನ್ನ ಕರ್ತವ್ಯಗಳನ್ನು ಅರಿತು ನಡೆಯುವ ಈಕೆ ಪತಿವ್ರತೆಯು ಅತ್ತೆ ಮಾವಂದಿರ ಹಾಗೂ ಬಂಧು ಬಳಗ ದವರಿಗೆ ಆದರ್ಶ ನಾರಿಯೋಗಿ ಬಾಳುವಳು.

. ಪೂರ್ವ ಭದ್ರ ನಕ್ಷತ್ರದಲ್ಲಿ ಪ್ರಥಮ ಋತುಮತಿಯಾದವರು ದರಿದ್ರ ಜೀವನ ನಡೆಸುವಳು. ಬಂಧು ಬಳಗದವರು ಈರ್ಷೆ ವೈ ಮನಸ್ಸು ಹೊಂದಿದವಳು  ಯಾವಾಗಲೂ ತಾನೇ ಶ್ರೇಷ್ಠ ತನ್ನದೇ ಯೋಗ್ಯವೆಂದು ಹಠ ಸಾಧಿಸುವಾಕೆ. ಪತಿಯಲ್ಲಿ ಭಕ್ತಿ ಇಲ್ಲದವಳು. ಸೋಮಾರಿ, ದುಷ್ಟ ಸ್ವಭಾವದ ಮಕ್ಕಳನ್ನು ಹೊಂದಿ ಬಂಧು ಬಳಗದವರಿಂದ ದೂರವಾಗುವವಳು. ಅಲ್ಪಾಯುಷ್ಯವುಳ್ಳವಳು.

 ಉತ್ತರಾಭಾದ್ರ ನಕ್ಷತ್ರದಲ್ಲಿ ಋತುಮತಿಯಾದಾಕೆಯು ಪತಿ ವ್ರತಾ ಶಿರೋಮಣಿಯೂ, ಪತಿ ಪುತ್ರ ಪುತ್ರಿ ಯೊಂದಿಗೆ ಸಂತೃಪ್ತಿ ಜೀವನ ನಡೆಸುವಾಕೆಯೂ, ಸತತೋದ್ಯೋಗಿಯಾಗಿರುವ ಇವಳು ಬಂಧು ಬಳಗದವರ ಅಭಿಮಾನಿಯ ಧರ್ಮದಲ್ಲಿ ಆಸಕ್ತಿ ಯುಳ್ಳ ಈ ಮಹಿಳೆ ಸಕಲ ಆದರ್ಶ ನಾರಿ ಗುಣಗಳನ್ನು ಹೊಂದಿದಾಕೆಯು ಆಗುವಳು.

 ರೇವತಿ ನಕ್ಷತ್ರದಲ್ಲಿ ಋತುಮತಿಯಾದವಳು ಸುಪುತ್ರನನ್ನು ಹೆತ್ತು. ಬಂಧು ಬಳಗಕ್ಕೆಲ್ಲ ಸಂತೋಷವನ್ನುಂಟು ಮಾಡುವಳು.ಸದ್ಗುಣಿಯಾದ ಈಕೆ ಸಮಾಧಾನವಾಗಿಯೂ ಇರುವಳು. ಪತಿಭಕ್ತಿ ಬಂಧು ಬಳಗದವರ ಅಭಿಮಾನಿ ಸ್ತ್ರಿಯಾಗಿ ಸಖೀ ಆದರ್ಶ ಗುಣಗಳನ್ನು ಹೊಂದಿದಾಕೆಯಾಗಿ  ಗೃಹಸ್ಥ ಜೀವನ ನಡೆಸುವವಳು.