ಸೆಲೆಬ್ರೆಟಿಗಳನ್ನು ನೋಡೋದಕ್ಕೆ ಫ್ಯಾನ್ಸ್ ಮುಗಿಬೀಳೋದು ಸಹಜ. ಆದ್ರೆ ಅಭಿಮಾನಿಗಳ ಅತ್ಯುತ್ಸಾಹ ಬಹಳಷ್ಟು ಸಲ ನಟ-ನಟಿಯರಿಗೆ ಸಮಸ್ಯೆ ತಂದೊಡ್ಡಿರುವುದೂ ಉಂಟು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಟಿ ನಿಧಿ ಅಗರ್ವಾಲ್‌ಗೆ ಈ ಕಹಿ ಅನುಭವ ಆಗಿತ್ತು. ಇದೀಗ ನಟಿ ಸಮಂತಾಗೂ ಅದರ ಬಿಸಿ ತಟ್ಟಿದೆ.
ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕಿ ನಿಧಿ ಅಗರ್ವಾಲ್ ವಾಪಸ್ ತೆರಳುವಾಗ ಫ್ಯಾನ್ಸ್ ಕ್ರೌಡ್ ಮಧ್ಯೆ ನಟಿ ಸಿಕ್ಕಿಕೊಂಡು ಭಾರೀ ಕಸಿವಿಸಿ ಅನುಭವಿಸಿದ್ದರು. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ನಟಿ ಸಮಂತಾಗೂ ಅದೇ ರೀತಿ ಆಗಿದೆ.
ಹೈದರಾಬಾದ್‌ನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ತೆರಳುತ್ತಿದ್ದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಫ್ಯಾನ್ಸ್ ಮೈಮೇಲೆ ಮುಗಿಬೀಳಲು ಯತ್ನಿಸಿದ ಘಟನೆ ನಡೆದಿದೆ. ಸನ್ನಿವೇಶದ ವಿಡಿಯೋಗಳು ಈಗ ವೈರಲ್ ಆಗಿವೆ.

ಹೌದು, ಭಾನುವಾರ ಸಂಜೆ ಸಮಂತಾ ರುತ್ ಪ್ರಭು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾರೆ. ಇನ್ನೂ ಕೆಲವರು ಶೇಕ್ ಹ್ಯಾಂಡ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಜೊತೆಗಿದ್ದ, ಗಾರ್ಡ್ಸ್ ಸಮಂತಾರನ್ನು ರಕ್ಷಿಸಿ ಕಾರಿನೊಳಗೆ ಹತ್ತಿಸಿದ್ದಾರೆ. ಅಭಿಮಾನಿಗಳ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ, ಸಮಂತಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.















