ಮನೆ ಜ್ಯೋತಿಷ್ಯ ವರ್ಷದ ಮೊದಲ ಸೂರ್ಯಗ್ರಹಣ:  ಯಾವ ರಾಶಿ ಎಷ್ಟು ಪ್ರಯೋಜನ .? ಇಲ್ಲಿದೆ ವಿವರ

ವರ್ಷದ ಮೊದಲ ಸೂರ್ಯಗ್ರಹಣ:  ಯಾವ ರಾಶಿ ಎಷ್ಟು ಪ್ರಯೋಜನ .? ಇಲ್ಲಿದೆ ವಿವರ

0

ಗ್ರಹಣವು ಒಂದು ರೀತಿಯ ಖಗೋಳ ಘಟನೆಯಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಗ್ರಹಣವಾದರೂ, ಅದು ಮನುಷ್ಯನ ರಾಶಿಚಕ್ರ ಚಿಹ್ನೆಗಳ ಬೀರುವ ಪರಿಣಾಮವನ್ನು ತಿಳಿಸುತ್ತದೆ.

ಈ ವರ್ಷದ ಮೊದಲ ಸೂರ್ಯ ಗ್ರಹಣವು ಏಪ್ರಿಲ್ ತಿಂಗಳ 30ನೇ ತಾರೀಖಿನಂದು ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ. ಪಂಚಾಂಗದ ಪ್ರಕಾರ, 2022 ರ ಮೊದಲ ಸೂರ್ಯ ಗ್ರಹಣವು ಮಧ್ಯಾಹ್ನ 12:15 ರಿಂದ ಸಂಜೆ 04:07 ರವರೆಗೆ ಸಂಭವಿಸುತ್ತದೆ. ಸೂರ್ಯ ಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತಾನೆ. ಇದರಿಂದಾಗಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪುವುದಿಲ್ಲ. ಈ ಇಡೀ ಘಟನೆಯನ್ನು ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.

ಸೂರ್ಯ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದರೂ, ಇದು ಕೆಲವು ಜನರಿಗೆ ಮಂಗಳಕರವಾಗಿರಬಹುದು. ಆದ್ದರಿಂದ, ಸೂರ್ಯ ಗ್ರಹಣವು ರಾಶಿಚಕ್ರ ಚಿಹ್ನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿರಿ.

ಮೇಷ ರಾಶಿ: ನೀವು ಮೇಷ ರಾಶಿಯವರಾಗಿದ್ದರೆ, ಈ ಸೂರ್ಯ ಗ್ರಹಣದ ಸಮಯದಲ್ಲಿ ನೀವು ಹಣಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನೀವು ಗ್ರಹಣದ ದಿನದಂದು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲೇಬೇಡಿ.

ವೃಷಭ ರಾಶಿ: ನೀವು ವೃಷಭ ರಾಶಿಯವರಾಗಿದ್ದರೆ, ಈ ಸೂರ್ಯ ಗ್ರಹಣದ ದಿನದಂದು ನಿಮ್ಮಲ್ಲಿ ಆತ್ಮವಿಶ್ವಾಸ ಕಡಿಮೆಯಾಗಲಿದೆ. ಈ ದಿನದಂದು ಅನಗತ್ಯ ಕೋಪ ಅಥವಾ ಒತ್ತಡವನ್ನು ತೆಗೆದುಕೊಳ್ಳುವುದನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಿರಿ.

 ಮಿಥುನ ರಾಶಿ: ಮಿಥುನ ರಾಶಿಚಕ್ರದ ಜನರು ಸೂರ್ಯ ಗ್ರಹಣದ ದಿನದಂದು ಜನದಟ್ಟಣೆಯ ಸ್ಥಳಗಳಿಗೆ ಹೋಗಲೇಬೇಡಿ. ನಿಮ್ಮ ಸುತ್ತ ಮುತ್ತಲಿನ ಜನರ ಚಲನವಲನಗಳ ಮೇಲೆ ಒಂದು ಕಣ್ಣಿಡಿ ಮತ್ತು ನೀವು ತುಂಬಾನೇ ಜಾಗರೂಕರಾಗಿರಿ.

ಕರ್ಕಾಟಕ ರಾಶಿ: ಈ ಸೂರ್ಯ ಗ್ರಹಣವು ಈ ರಾಶಿಚಕ್ರದ ಜನರಿಗೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಕುಟುಂಬ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೆ, ಆರ್ಥಿಕ ಸಮಸ್ಯೆಗಳು ಸಹ ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತಿದೆ.

ಸಿಂಹ ರಾಶಿ: ಸಿಂಹ ರಾಶಿಚಕ್ರದ ವ್ಯಕ್ತಿಯು ತಮ್ಮ ಹಳೆಯ ವ್ಯವಹಾರದಿಂದ ಹಣವನ್ನು ಪಡೆಯಬಹುದು. ಆದರೂ, ಸೂರ್ಯ ಗ್ರಹಣದ ಸಮಯದಲ್ಲಿ, ಯಾವುದೇ ರೀತಿಯ ಹೊಸ ಹಣಕಾಸು ಹೂಡಿಕೆ ಮಾಡಬೇಡಿ.

ಕನ್ಯಾ ರಾಶಿ: ಸೂರ್ಯ ಗ್ರಹಣದ ಸಮಯದಲ್ಲಿ ಯಶಸ್ಸನ್ನು ಪಡೆಯಲು ನೀವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಇದಲ್ಲದೆ, ಈ ಸಮಯದಲ್ಲಿ ಉದ್ಯೋಗಗಳನ್ನು ಬದಲಾಯಿಸಲು ನೀವು ಪ್ರಯತ್ನಿಸಬೇಡಿ.

ತುಲಾ ರಾಶಿ: ಸೂರ್ಯ ಗ್ರಹಣವು ಈ ರಾಶಿಚಕ್ರ ಚಿಹ್ನೆಗೆ ಸ್ವಲ್ಪ ನಕಾರಾತ್ಮಕವೆಂದು ಹೇಳಲಾಗುತ್ತಿದೆ. ಈ ಗ್ರಹಣದ ಸಮಯದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕಾನೂನು ವಿವಾದಗಳಿಂದ ನೀವು ಆದಷ್ಟು ದೂರವಿರಿ.

ವೃಶ್ಚಿಕ ರಾಶಿ: ಸೂರ್ಯ ಗ್ರಹಣದಿಂದಾಗಿ, ನೀವು ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ವ್ಯವಹಾರದಲ್ಲಿ ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

ಧನು ರಾಶಿ: ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಗ್ರಹಣದ ಸಮಯದಲ್ಲಿ ಅತಿಯಾದ ವಿಶ್ವಾಸದಿಂದ ಇರಬೇಡಿ ಮತ್ತು ಗ್ರಹಣದ ಸಮಯದಲ್ಲಿ ನಿಮ್ಮ ಸ್ವಭಾವವನ್ನು ಸೌಮ್ಯವಾಗಿರಿಸಿಕೊಳ್ಳುವುದು ಒಳ್ಳೆಯದು.

ಮಕರ ರಾಶಿ: ಸೂರ್ಯ ಗ್ರಹಣದ ಸಮಯದಲ್ಲಿ, ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ. ಅಲ್ಲದೆ, ಬೆಟ್ಟಿಂಗ್ ಮತ್ತು ಜೂಜಾಟವನ್ನು ಅಡಲೇಬೇಡಿ. ಹಣದ ತೊಂದರೆ ಎದುರಾಗಬಹುದು.

ಕುಂಭ ರಾಶಿ: ನೀವು ಮಾಡಿದಂತಹ ಹೂಡಿಕೆಯಲ್ಲಿ ನಷ್ಟ ಉಂಟಾಗಬಹುದು. ಕೌಟುಂಬಿಕ ಕಲಹಗಳಿಂದಾಗಿ ಮನಸ್ಸು ಚಂಚಲವಾಗಿರುತ್ತದೆ. ಸಂಗಾತಿಯ ಮಾತುಗಳು ನಿಮಗೆ ತೊಂದರೆಯನ್ನು ಉಂಟು ಮಾಡಬಹುದು. ಯಾವುದೇ ರೀತಿಯ ಅಪಘಾತವನ್ನು ತಪ್ಪಿಸಲು ಸ್ವಲ್ಪ ತಾಳ್ಮೆಯಿಂದಿರುವುದು ಉತ್ತಮ.

ಮೀನ ರಾಶಿ: ಈ ರಾಶಿಯವರಿಗೆ ಸೂರ್ಯ ಗ್ರಹಣವು ಒಳ್ಳೆಯದೆಂದು ಸಾಬೀತಾಗಲಿದೆ. ವ್ಯವಹಾರದಲ್ಲಿ ಮಾಡಿದ ಹಣಕಾಸು ಹೂಡಿಕೆಯಿಂದ ಲಾಭವಿರುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಬಹುದು.