ಮನೆ ರಾಜ್ಯ ಕಿದ್ವಾಯಿ ಅಸ್ಪತ್ರೆಯಲ್ಲಿ ಮೊದಲ ಯಶಸ್ವಿ ಮಕ್ಕಳ ಅಲೋಜೆನಿಕ್ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆ

ಕಿದ್ವಾಯಿ ಅಸ್ಪತ್ರೆಯಲ್ಲಿ ಮೊದಲ ಯಶಸ್ವಿ ಮಕ್ಕಳ ಅಲೋಜೆನಿಕ್ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಚಿಕಿತ್ಸೆ

0

ಬೆಂಗಳೂರು: ಹಲವು ಪ್ರಖ್ಯಾತಿಗೆ ಪಾತ್ರವಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಮತ್ತೊಂದು ಸಾಧನೆ ಮಾಡಿದೆ. 14-ವರ್ಷದ ರೋಗಿಯೊಬ್ಬರಿಗೆ ಮೊದಲ ಪೀಡಿಯಾಟ್ರಿಕ್ ಮ್ಯಾಚಡ್ ಸಿಬ್ಲಿಂಗ್ ಡೋನರ್ ಅಲೋಜೆನಿಕ್ ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್ (ಬಿಎಂಟಿ) (ಅಸ್ತಿಮಜ್ಜೆ ಕಸಿ) ಚಿಕಿತ್ಸೆಯನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯ ಕಿದ್ವಾಯಿ ಆಸ್ಪತ್ರೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

Join Our Whatsapp Group

ಅಕ್ಯೂಟ್ ಮೈಲೋಯ್ಡ್ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್ ಪ್ರಕಾರ) ದಿಂದ ಬಳಲುತ್ತಿದ್ದ 14-ವರ್ಷದ ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಎರಡು ತಿಂಗಳ ಹಿಂದೆ ನಗರದಲ್ಲಿರುವ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗದ ಕ್ಯಾನ್ಸರ್ ವಕ್ರೀಕಾರಕವಾಗಿತ್ತು, ಅಂದರೆ ಇದು ಸಾಂಪ್ರದಾಯಿಕ ಕೀಮೋಥೆರಪಿಗೆ ನಿರೋಧಕವಾಗಿತ್ತು.

ಬಿಎಂಟಿ ಮಕ್ಕಳ ವಿಭಾಗದ ವೈದ್ಯೆ ಡಾ ವಸುಂಧರಾ ಕೈಲಾಸನಾಥ್ ಹಾಗೂ ಅವರ
ತಂಡವು ರೋಗಿಯ ಕಿರಿಯ ಸಹೋದರನ ಕಾಂಡಕೋಶಗಳನ್ನು ಬಳಸಿಕೊಂಡು ಅಲೋಜೆನಿಕ್ ನಂತರ ಹೆಚ್ಚಿನ ಪ್ರಮಾಣದ ಕೀಮೋಥೆರಪಿಯೊಂದಿಗೆ ಚಿಕಿತ್ಸೆ ನೀಡಲು ನಿರ್ಧರಿಸಿತು. ಆಕೆಯ ಕಿರಿಯ ಸಹೋದರ ಸಂಪೂರ್ಣ ಆನುವಂಶಿಕ ಹೊಂದಾಣಿಕೆ 12/12 ಎಚ್‌ಎಲ್‌ಎ ಹೊಂದಾಣಿಕೆಯಾಗಿದ್ದರಿಂದ ಕಸಿ ಯಶಸ್ವಿಗೊಳಿಸಲಾಯಿತು. ಅರ್ಚನಾಳ ತಂದೆ ದಿನಗೂಲಿ ನೌಕರರಾಗಿದ್ದು, ತಾಯಿ ಕಾರ್ಖಾನೆಯೊಂದರಲ್ಲಿ ಕಾರ್ಯನಿವಹಿಸುತ್ತಿದ್ದಾರೆ.

ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದ ಬಿಎಂಟಿ ರೋಗಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಅವರು ಪ್ರಸ್ತುತ ಈ ರೋಗದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ, ಎಂದು ವೈದ್ಯಕೀಯ ಶಿಕ್ಷಣ, ಜೀವನೋಪಾಯ ಹಾಗೂ ಕೌಶಲ್ಯಭಿವೃದ್ದಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ತಿಳಿಸಿದರು.

“ಕಾಂಡಕೋಶ ಕಸಿಗಳು ಮುಖ್ಯವಾಗಿ ಎರಡು ವಿಧಗಳಿವೆ. ಆಟೋಲೋಗಸ್ (ರೋಗಿಯ ಸ್ವಂತ ಕಾಂಡಕೋಶಗಳನ್ನು ಬಳಸಲಾಗುತ್ತದೆ) ಮತ್ತು ಅಲೋಜೆನಿಕ್ (ಸ್ವೀಕೃತದಾರರಿಗೆ ನೀಡಿದ ದಾನಿ ಕಾಂಡಕೋಶಗಳು). ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಆಟೋಲೋಗಸ್ ಕಸಿ ವೆಚ್ಚವು 7-15 ಲಕ್ಷ ರೂ.ಗಳವರೆಗೆ ಇರುತ್ತದೆ ಮತ್ತು ಅಲೋಜೆನಿಕ್ ಬಿಎಂಟಿಗಳು ಸುಮಾರು 15-30 ಲಕ್ಷ ರೂ.
ಇರುತ್ತದೆ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿ (ಪಿಎಂಆರ್‌ಎಫ್‌), ಮುಖ್ಯಮಂತ್ರಿಗಳ ಪರಿಹಾರ ನಿಧಿ (ಸಿಎಂಆರ್‌ಎಫ್‌), ಎಸ್‌ಸಿಪಿ/ ಟಿಎಸ್‌ಪಿ ಯೋಜನೆ ಮತ್ತು ಸಿಜಿಎಚ್‌ಎಸ್‌ ಯೋಜನೆಗಳ ಮೂಲಕ ಕಿದ್ವಾಯಿ ಬಿಎಂಟಿ ಕೇಂದ್ರದಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ,” ಎಂದು ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.

ರಾಜ್ಯದ ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲವಾಗಲು ಹಾಗೂ ಬಡ ರೋಗಿಗಳಿಗೆ
ಅಸ್ಥಿಮಜ್ಜೆ ಕಸಿ ಸೇವೆ ಲಭ್ಯ ಹಾಗೂ ಕೈಗೆಟುಕುವಂತೆ ಮಾಡಲಾಗುತ್ತಿದೆ. ಕಿದ್ವಾಯಿ ಸಂಸ್ಥೆಯ ಅಸ್ಥಿಮಜ್ಜೆ ಕಸಿ ಘಟಕವು ತೀವ್ರ ನಿಗಾ ಘಟಕ ಸೇರಿದಂತೆ 14 ಹಾಸಿಗೆಗಳ ಸೌಲಭ್ಯದೊಂದಿಗೆ ಭಾರತದ ಅತಿದೊಡ್ಡ ಅಸ್ತಿಮಜ್ಜೆ ಕಸಿ ಘಟಕಗವಾಗಿ ಹೊರಹೊಮ್ಮಿದೆ. ಬಡ ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ಅತಿಮಜ್ಜೆ ಕಸಿ ಚಿಕಿತ್ಸೆ ನೀಡುತ್ತಿರುವ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ, ಎಂದು ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ಎನ್. ಮಂಜುಶ್ರೀ ಹೇಳಿದ್ದಾರೆ.

ಕಿದ್ವಾಯಿ ಸ್ಮಾಕರ ಗಂಥಿ ಸಂಸ್ಥೆ ಕ್ಯಾನ್ಸರ್‌‌ ಚಿಕಿತ್ಸೆಗಾಗಿ ಇರುವ ಏಕೈಕ ಸ್ವಾಯತ್ತಾ ಸರ್ಕಾರಿ ಆಸ್ಪತ್ರೆಯಾಗಿದೆ. ಸಂಸ್ಥೆಯಲ್ಲಿ ಎಲ್ಲಾ ಕ್ಯಾನ್ಸರ್‌ ಪ್ರಕಾರಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲೂ ಕ್ಯಾನ್ಸರ್‌ ಪೀಡಿತ ಮಕ್ಕಳ ಮತ್ತು ವಯಸ್ಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಮೊದಲ ಪೀಡಿಯಾಟ್ರಿಕ್ ಬಿಎಂಟಿ ಅನ್ನು ಏಪ್ರಿಲ್ 2022 ರಲ್ಲಿ ನಡೆಸಲಾಯಿತು. ಅಂದಿನಿಂದ, 90 ಮಕ್ಕಳ ಮತ್ತು ವಯಸ್ಕರ ಅಸ್ಥಿಮಜ್ಜೆ ಕಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ಡಾ.ವಿ.ಲೋಕೇಶ್, ವೈದ್ಯಕೀಯ ಅಧೀಕ್ಷಕರಾದ ಡಾ.ನವೀನ್ ಟಿ ಮತ್ತು ಡಾ.ಪ್ರಭಾ ಶೇಷಾಚಾರ್, ಆರ್‌ಎಂಒ ಉಪಸ್ಥಿತರಿದ್ದರು.