ಮನೆ ರಾಷ್ಟ್ರೀಯ ಸರ್ಕಾರಗಳಿಗೆ ಆರ್ಥಿಕ ಶಿಸ್ತು ಅತಿ ಮುಖ್ಯ: ಪ್ರಧಾನಿ ನರೇಂದ್ರ ಮೋದಿ

ಸರ್ಕಾರಗಳಿಗೆ ಆರ್ಥಿಕ ಶಿಸ್ತು ಅತಿ ಮುಖ್ಯ: ಪ್ರಧಾನಿ ನರೇಂದ್ರ ಮೋದಿ

0

ನವದೆಹಲಿ: ಸರ್ಕಾರಗಳಿಗೆ ಆರ್ಥಿಕ ಶಿಸ್ತು ಅತಿ ಮುಖ್ಯ. ಬೇಜವಾಬ್ದಾರಿಯ ಆರ್ಥಿಕ ನೀತಿಗಳು ಹಾಗೂ ಉಚಿತ ಯೋಜನೆಗಳು ಅಲ್ಪಾವಧಿಯಲ್ಲಿ ಜನಪ್ರಿಯತೆ ತಂದು ಕೊಡಬಲ್ಲವು. ಆದರೆ, ದೀರ್ಘಾವಧಿಯಲ್ಲಿ ದೊಡ್ಡ ಬೆಲೆ ತೆರಬೇಕಾದೀತು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿ 20 ಶೃಂಗಸಭೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಬೇಜವಾಬ್ದಾರಿಯ ಹಣಕಾಸು ನೀತಿ ಹಾಗೂ ಜನಪ್ರಿಯ ಯೋಜನೆಗಳು ಅಲ್ಪಾವಧಿಯಲ್ಲಿ ರಾಜಕೀಯವಾಗಿ ಫಲ ನೀಡಬಹುದು. ಆದರೆ, ದೀರ್ಘಾವಧಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ರಾಜ್ಯಗಳು ಹಣಕಾಸು ಶಿಸ್ತು ಕುರಿತು ಹೆಚ್ಚು ಎಚ್ಚರ ವಹಿಸಬೇಕು.

ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಿರುವುದು ಕಳವಳಕಾರಿ ವಿಷಯ. ಇಂತಹ ದೇಶಗಳು ಈಗ ವಿತ್ತೀಯ ಶಿಸ್ತಿಗೆ ಮಹತ್ವ ನೀಡುತ್ತಿವೆ.

ಉಚಿತ ಯೋಜನೆಗಳ ಸಾಧಕ–ಬಾಧಕಗಳ ಬಗ್ಗೆ ಮುಖ್ಯಕಾರ್ಯದರ್ಶಿಗಳ ಸಭೆಯಲ್ಲಿ ಇತ್ತೀಚಿಗೆ ತಿಳಿಸಿ ಹೇಳಿದ್ದೇನೆ ಎಂದು ಪಿಟಿಐ ಸಂಪಾದಕ ವಿಜಯ್ ಜೋಶಿ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಇತ್ತೀಚಿಗೆ ಚುನಾವಣಾ ರ್‍ಯಾಲಿಯಲ್ಲಿ ಮೋದಿ ಅವರು, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ಹಿಂದಿನ ಲೇಖನಧಾರವಾಡ: ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ
ಮುಂದಿನ ಲೇಖನಪತಿಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದರೂ ಪತ್ನಿ ಕ್ರೌರ್ಯದ ದೂರು ದಾಖಲಿಸಬಹುದು: ಪಾಟ್ನಾ ಹೈಕೋರ್ಟ್