ಬಾದಾಮಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಪೋಷಕಾಂಶದಿಂದ ಕೂಡಿರುವ ಬಾದಾಮಿಯು ಹಲವಾರು ಜೀವಸತ್ವಗಳು ಮತ್ತು ಅಗತ್ಯವಾದ ಖನಿಜಗಳ ದೈನಂದಿನ ಅಗತ್ಯವನ್ನು ಪೂರೈಸುತ್ತದೆ. ದೇಹದ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಲು ಒಂದು ಹಿಡಿ ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ಅದನ್ನು ಸಿಪ್ಪೆ ಸುಲಿದು ಸೇವಿಸಬೇಕು.
ಬಾದಾಮಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ
ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುವಲ್ಲಿ ಉತ್ಕರ್ಷಣ ನಿರೋಧಕಗಳು ಎಷ್ಟು ಮುಖ್ಯವೆಂದು ನಮಗೆಲ್ಲರಿಗೂ ತಿಳಿದಿದೆ. ಬಾದಾಮಿಯು ಉತ್ಕರ್ಷಣ ನಿರೋಧಕಗಳ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ. ಇದು ದೇಹವನ್ನು ಆಕ್ಸಿಡೇಟಿವ್ ಒತ್ತಡ, ಉರಿಯೂತದಿಂದ ರಕ್ಷಿಸುತ್ತದೆ.
ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಪಡೆಯಲು ಬಾದಾಮಿಯ ಸಿಪ್ಪೆಯನ್ನುಬಿಸಾಡಬೇಡಿ ಎನ್ನುತ್ತದೆ ಕೆಲವು ಅಧ್ಯಯನಗಳು. ಯಾಕೆಂದರೆ ಬಾದಾಮಿ ಸಿಪ್ಪೆಯಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್ಗಳು ಕೇಂದ್ರೀಕೃತವಾಗಿವೆ ಎಂದು ಅಧ್ಯಯನಗಳು ಹೇಳುತ್ತದೆ.
ಬಾದಾಮಿಯಲ್ಲಿ ವಿಟಮಿನ್ ಇ ಹೇರಳವಾಗಿ ಇರುತ್ತದೆ
ವಿಟಮಿನ್ ಇ ಹೃದಯದ ಕಾರ್ಯಚಟುವಟಿಕೆಗೆ ಅಗತ್ಯವಿರುವ ಜೀವಸತ್ವಗಳಲ್ಲಿ ಒಂದಾಗಿದೆ ಮತ್ತು ಆಲ್ಝೈಮರ್ ಹೊಂದಿರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಬಾದಾಮಿಯು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದೆ.
ಬಾದಾಮಿಯಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ
ಬಾದಾಮಿಯನ್ನು ಅದ್ಭುತ ಆಹಾರವನ್ನಾಗಿ ಮಾಡುವ ಮತ್ತೊಂದು ಪೋಷಕಾಂಶವೆಂದರೆ ಅದರಲ್ಲಿ ಮೆಗ್ನೀಸಿಯಮ್ ನಿಂದ ಸಮೃದ್ಧವಾಗಿದೆ. ಮೆಗ್ನೀಸಿಯಮ್ ದೇಹದಲ್ಲಿ 200 ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 420 ಮಿಲಿಗ್ರಾಂ ಮೆಗ್ನೀಸಿಯಮ್ ಅನ್ನು ಸೇವಿಸಬೇಕು.
ಬಾದಾಮಿ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ
28 ಗ್ರಾಂ ಬಾದಾಮಿಯು 3.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ ಮತ್ತು ಇದು ಬಾದಾಮಿಯನ್ನು ಆಹಾರದ ಫೈಬರ್ನ ಉತ್ತಮ ಮೂಲವನ್ನಾಗಿ ಮಾಡುತ್ತದೆ. ಆದ್ದರಿಂದ, ನೀವು ಪ್ರತಿದಿನ ಬೆಳಿಗ್ಗೆ ಒಂದು ಹಿಡಿ ಬಾದಾಮಿಯನ್ನು ಸೇವಿಸಿದರೆ ಅದು ನಿಮ್ಮನ್ನು ದೀರ್ಘಕಾಲದವರೆಗೆ ಪೂರ್ಣವಾಗಿ ಇರಿಸಲು ಸಹಕರಿಸುತ್ತದೆ. ಪರಿಣಾಮವಾಗಿ ಇದು ದಿನವಿಡೀ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಬಾದಾಮಿ ಹೃದಯಕ್ಕೆ ಒಳ್ಳೆಯದು
ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಇರುವುದರಿಂದ ಇದು ಹೃದಯಕ್ಕೆ ಉತ್ತಮ ಆಹಾರವಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಾದಾಮಿಯ ಪಾತ್ರವನ್ನು ಹಲವಾರು ಅಧ್ಯಯನಗಳು ಕಂಡುಕೊಂಡಿವೆ.
ಬಾದಾಮಿಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಬಾದಾಮಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹೆಚ್ಚಿನ ಮಟ್ಟಗಳು ಹೃದಯದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ.