ಬೆಂಗಳೂರು: ಚರ್ಚೆಗೆ ಸಮಯ ಫಿಕ್ಸ್ ಮಾಡಿ. ನವೆಂಬರ್ 1ರ ನಂತರ ಯಾವ ದಿನಾಂಕವಾದ್ರೂ ನಿಗದಿಪಡಿಸಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚರ್ಚೆಗೆ ಒಪ್ಪಿದ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿ ಸಮಯ ನಿಗದಿಪಡಿಸುವಂತೆ ಹೇಳಿದ್ದಾರೆ.
ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಪಟಾಲಮ್ ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಹೆಚ್ ಡಿಕೆ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದರು.
“ಎನೀ ಟೈಮ್ ಚರ್ಚೆಗೆ ಟೈಮ್ ಫಿಕ್ಸ್ ಮಾಡಿ. ನವೆಂಬರ್ 1ರ ನಂತರ ದಿನಾಂಕ ನಿಗದಿಪಡಿಸಿ. ನಾನು ಏನು ಮಾಡಿದ್ದೇನೆ, ಅವರೇನು ಮಾಡಿದ್ದಾರೆ ಅನ್ನೋದನ್ನು ಅಲ್ಲೇ ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು, ಹಿಟ್ ಆಂಡ್ ರನ್ ಮಾಡೋದಲ್ಲ” ಎಂದು ಕಿಡಿಕಾರಿದರು.
ಸಮಯ ಫಿಕ್ಸ್ ಮಾಡಿ. ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದು ಹೇಳಿ ಹೆಚ್ ಡಿಕೆ ಬೇರೆ ಯಾವುದೇ ಆರೋಪಗಳಿಗೆ ಪ್ರತಿಕ್ರಿಯಿಸದೇ ಹೊರಟು ಹೋದರು.