ಮನೆ ವ್ಯಕ್ತಿತ್ವ ವಿಕಸನ ಮನುಷ್ಯನನ್ನು ಸರಿಪಡಿಸಿ ನಿಲ್ಲಿಸಿ ; ಪ್ರಪಂಚ ಪರಿಪೂರ್ಣವಾಗುತ್ತದೆ

ಮನುಷ್ಯನನ್ನು ಸರಿಪಡಿಸಿ ನಿಲ್ಲಿಸಿ ; ಪ್ರಪಂಚ ಪರಿಪೂರ್ಣವಾಗುತ್ತದೆ

0

ಅಲ್ಲೊಬ್ಬ ಅತ್ಯಂತ ಶಿಸ್ತಿನ ಅಪ್ಪನಿದ್ದ. ಅವನಿಗೊಬ್ಬ ತುಂಟ ತನಕ್ಕೆ ಹೆಸರಾದ ಬುದ್ಧಿವಂತ ಮಗಳಿದ್ದಳು. ಅದೊಂದು ದಿನ ಆತ ಯಾವುದೋ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದನು.

ಆದರೆ ಅವಳ ಮಗಳು ಅವನಿಗೆ ಕಾಟ ಕೊಡತೊಡಗಿದಳು. ಆಗ ಆಕೆಯನ್ನು ಕಾರ್ಯನಿರತವಾಗಿಸಲು ದೂರವಿಡಲು ಆತ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ ಪ್ರಪಂಚ ಭೂಪಟವನ್ನು ವಿವಿಧ ಗಾತ್ರಗಳಿಗೆ ಕತ್ತರಿಸಿ ಅವುಗಳನ್ನೆಲ್ಲ ಪುನಹ ಜೋಡಿಸಿ, ಸರಿಪಡಿಸಲು ಸೂಚಿಸಿದನು ಆಗ ಕಾರ್ಯವನ್ನು ಬಾಲಕಿ ಬಹುಬೇಗ ಮಾಡಿ ಮುಗಿಸಿದಳು. ಅವಳು ಅಪ್ಪನನ್ನು ಕರೆದು ತನಗೆ ಕೊಟ್ಟ ಕೆಲಸ ಪೂರೈಸಿರುವುದಾಗಿ ತಿಳಿಸಿದಳು. ಮಗಳ ಚಾತುರ್ಯ ಕಂಡು ಅಚ್ಚರಿಗೊಂಡ ಅಪ್ಪನು  ಅದನ್ನು ಹೇಗೆ ನಿಭಾಯಿಸಿದಳೆoದು ಎಂದು ಆಕೆಯನ್ನು ಕೇಳಿದನು. ಆಗ ಆ ಹುಡುಗಿ ಹೀಗೆ ಉತ್ತರಿಸಿದ್ದಳು.

ಪ್ರಶ್ನೆಗಳು :-

1.ಹುಡುಗಿಯ ಉತ್ತರ ಏನಾಗಿತ್ತು? 2. ಈ ಕಥೆ ಪರಿಣಾಮವೇನು ?

ಉತ್ತರಗಳು :-

1.ಹುಡುಗಿಗೆ ಹೀಗೆ ಹೇಳಿದಳು, “ಪ್ರಪಂಚ ಭೂಪಟದ ಹಿಂದೆ ಮನುಷ್ಯನೊಬ್ಬನ ಚಿತ್ರವಿತ್ತು. ಆ ಮನುಷ್ಯನನ್ನು ಸರಿಪಡಿಸಿದಾಗ ಪ್ರಪಂಚವು ಸರಿಯಾದ ರೂಪ ಪಡೆಯಿತು”

2. ಜನರು ಜಗತ್ತನ್ನು ನಿರ್ಮಿಸುವರು, ಮನುಷ್ಯನನ್ನು ಸರಿಪಡಿಸಿದರೆ ವಿಶ್ವವೇ ಸರಿಯಾಗುತ್ತದೆ. ಈ ಪ್ರಪಂಚದ ಎಲ್ಲಾ ಪ್ರಮುಖ ಸಮಸ್ಯೆಗಳು ಮನುಷ್ಯರಿಂದಲೇ ಸೃಷ್ಟಿಸಲ್ಪಟ್ಟಿದೆ.

ಹಿಂದಿನ ಲೇಖನರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಿಸಲು ಮೂರು ತಂಡಗಳ ಆಗಮನ: ಎನ್.‌ ಚಲುವರಾಯಸ್ವಾಮಿ
ಮುಂದಿನ ಲೇಖನಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ