ಮನೆ ಕ್ರೀಡೆ ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲೆ ಗಮನ: ಹರ್ಮನ್‌ಪ್ರೀತ್‌ ಕೌರ್‌

ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲೆ ಗಮನ: ಹರ್ಮನ್‌ಪ್ರೀತ್‌ ಕೌರ್‌

0

ಕೇಪ್‌’ಟೌನ್‌ : ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲೆ ಗಮನಹರಿಸಿದ್ದೇವೆ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಫೆ.12 ರಂದು ಪಾಕಿಸ್ತಾನ ವಿರುದ್ಧ ಪೈಪೋಟಿ ನಡೆಸಲಿದೆ. ಮರುದಿನ (ಫೆ.13) ಮುಂಬೈನಲ್ಲಿ ಡಬ್ಲ್ಯುಪಿಎಲ್‌ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜು ಪ್ರಕ್ರಿಯೆಗೆ ಮುನ್ನ ನಮಗೆ ಅತ್ಯಂತ ಮಹತ್ವದ ಪಂದ್ಯ ಆಡಬೇಕಿದೆ. ತಂಡದ ಎಲ್ಲ ಸದಸ್ಯರೂ ಆ ಪಂದ್ಯದತ್ತ ಗಮನ ಕೇಂದ್ರೀಕರಿಸಿದ್ದಾರೆ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿಶ್ವಕಪ್‌ ಟೂರ್ನಿ ಇತರ ಎಲ್ಲಕ್ಕಿಂತಲೂ ಮಹತ್ವದ್ದಾಗಿದೆ. ನಮ್ಮ ಗಮನ ಐಸಿಸಿ ಟ್ರೋಫಿಯತ್ತ ನೆಟ್ಟಿದೆ. ಒಬ್ಬ ಆಟಗಾರ್ತಿಯಾಗಿ ನಿಮಗೆ ಯಾವುದು ಮುಖ್ಯವಾದುದು ಎಂಬುದು ತಿಳಿದಿರಬೇಕು. ಈ ಸಮಯ ದಲ್ಲಿ ಯಾವುದು ಮುಖ್ಯ ಎಂಬುದನ್ನು ತಿಳಿಯುವಷ್ಟು ನಾವೆಲ್ಲರೂ ಪ್ರಬುದ್ಧರಾಗಿದ್ದೇವೆ ಎಂದು ಹೇಳಿದರು.

ಹಿಂದಿನ ಲೇಖನಸಾಕು ನಾಯಿ ಕಡಿತ ಪ್ರಕರಣ: 12 ವರ್ಷದ ಬಳಿಕ ನಾಯಿ ಮಾಲೀಕನಿಗೆ 3 ತಿಂಗಳು ಜೈಲು
ಮುಂದಿನ ಲೇಖನವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಹೈ ಕೋರ್ಟ್