ಮನೆ ಮನೆ ಮದ್ದು ಸೋಂಪು

ಸೋಂಪು

0

ಬಡೇ ಸೋಪು, ಸೋಂಪು ಹೆಸರಿನ ಸಾಂಬಾರ ಪದಾರ್ಥ. ತಾಜಾ ಸೋಂಪು ದಟ್ಟ ಹಳದಿ ಬಣ್ಣದಾಗಿರುತ್ತದೆ. ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನ ಭಾರತೀಯ ಅಡುಗೆಯಲ್ಲಿ ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ. ತೈಲಾಂಶ ತೆಗೆದ ಬೀಜದಲ್ಲಿ ಕಡಿಮೆ ಸುಗಂಧ ಶೇ. 4ರಷ್ಟು ತೈಲ ಅಂಶವಿರುವ ಸೋಂಪು ಬೀಜದಲ್ಲಿ ಇನ್ನೊಂದು ಬಗೆಯ ಸ್ಥಿರ ತೈಲ ಸುಮಾರು ಶೇ. 16 ಭಾಗದಷ್ಟು ಇರುತ್ತದೆ.  

ಊಟದ ಅನಂತರ ಮುಖ ಸುಗಂಧಕೋಸ್ಕರ ಮೆಲ್ಲುವ ಸೋಂಪು ಹೊಟ್ಟೆ ಹಸಿವೆ ಹೆಚ್ಚಿಸುತ್ತದೆ. ಹೊಟ್ಟೆ ಒಬ್ಬರ, ಊರಿ ನಿವಾರಿಸುತ್ತದೆ. ಆಮಶಂಕೆ, ಅಜೀರ್ಣ, ಕೆಮ್ಮು, ದಮ್ಮು, ಮಂದ ದೃಷ್ಟಿ, ಮುಟ್ಟಿನ ಕಡಿಮೆ ಸ್ರಾವಗಳಲ್ಲಿ ಸೋಂಪು ಬಹಳ ಉಪಕಾರಿಯಾಗಿದೆ.

 ಔಷಧೀಯ ಗುಣಗಳು :-

* ಸೋಂಪು ಅರೆದು ಹಣೆಗೆ ಲೇಪ ಹಾಕುವುದರಿಂದ ಬಿಸಿಲುಗಾಲದ ತಲೆ ತಿರುಗುವಿಕೆ ತಲೆನೋವು ಪರಿಹಾರವಾಗುತ್ತದೆ.

* ಸೋಂಪು ಗಿಡದ ಎಲೆಯನ್ನು ಬೆವರು ಬರಿಸಲು, ಮೂತ್ರ ಪ್ರಮಾಣ ಹೆಚ್ಚಿಸಲು ಬಳಸಬಹುದು.   

*ಸೋಂಪು ಅರೆದು ಕುಡಿದರೆ ಮೂತ್ರ ಉರಿ ಕಡಿಮೆಯಾಗುತ್ತದೆ.

* ಇತರ ಸಾಂಬಾರಗಳ ಸಂಗಡ ಸೋಂಪು ಕೂಡಿಸಿ ಕೊಡುವುದರಿಂದ ಅವುಗಳ ತೀಕ್ಷ್ಣತೆಗೆ ಪರಿಹಾರ ಸಿಗುತ್ತದೆ.      

* ಒಣ ಕೆಮ್ಮು, ಬಾಯಿ ದುರ್ವಾಸನೆಯನ್ನು ದೂರವಾಗಿಸಲು ಸೋಂಪನ್ನು ಜಗೆಯುವುದು ಒಳ್ಳೆಯದು.

ಹಿಂದಿನ ಲೇಖನಹರೇ ಶ್ರೀನಿವಾಸ
ಮುಂದಿನ ಲೇಖನಧಾರಣ