ಮನೆ ಆರೋಗ್ಯ ಕಡಿಮೆ ರಕ್ತದೊತ್ತಡ ಇರುವವರು ಸೇವಿಸಬೇಕಾದ ಆಹಾರಗಳು

ಕಡಿಮೆ ರಕ್ತದೊತ್ತಡ ಇರುವವರು ಸೇವಿಸಬೇಕಾದ ಆಹಾರಗಳು

0

ಅಧಿಕ ರಕ್ತದೊತ್ತಡ ಹೊಂದಿರುವವರಂತೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಕೂಡ ಅಪಾಯಕಾರಿ ಸಮಸ್ಯೆಯಿಂದ ಬಳಲುತ್ತಾರೆ.
ಅಧಿಕ ರಕ್ತದೊತ್ತಡದಂತೆ ಕಡಿಮೆ ರಕ್ತದೊತ್ತಡವು ಕೂಡ ಬಹಳ ಅಪಾಯಕಾರಿ. ಇದು ಹೃದಯ, ಮೆದುಳು ಮತ್ತು ಇತರ ಪ್ರಮುಖ ಅಂಗಗಳಿಗೆ ಅಸಮರ್ಪಕ ರಕ್ತದ ಹರಿವನ್ನು ಉಂಟು ಮಾಡುತ್ತದೆ.
ಇದರ ಪರಿಣಾಮ ತಲೆತಿರುಗುವಿಕೆ, ದೇಹದಲ್ಲಿ ಅಸ್ವಸ್ಥತೆ ಉಂಟು ಮಾಡಬಹುದು. ಹಾಗಾದರೆ ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸುವ ಸುಲಭ ವಿಧಾನ ಹಾಗೂ ಸೇವಿಸಬೇಕಾದ ಆಹಾರದ ಮಾಹಿತಿ ಇಲ್ಲಿದೆ.
ಉಪ್ಪು
ಕಡಿಮೆ ರಕ್ತದೊತ್ತಡವನ್ನು ಹೊಂದಿರುವವರು ಉಪ್ಪನ್ನು ಸೇವನೆ ಮಾಡುವುದು ಬಹಳ ಮುಖ್ಯ. ಇದಕ್ಕೆ ತದ್ವಿರುದ್ಧವಾಗಿ ಅಧಿಕ ರಕ್ತದೊತ್ತಡವನ್ನು ಹೊಂದಿರುವವರು ಉಪ್ಪಿನ ಸೇವನೆಯನ್ನು ಮಿತಗೊಳಿಸಬೇಕು.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಡಿಮೆ ರಕ್ತದೊತ್ತಡ ಹೊಂದಿರುವವರು ದೈನಂದಿನ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಂದ ನೈಸರ್ಗಿಕವಾಗಿ ಪಡೆಯುವುದರ ಜೊತೆಗೆ ಒಂದು ಟೀ ಚಮಚ ಉಪ್ಪನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು ಎನ್ನುತ್ತದೆ.
ಒಂದು ವೇಳೆ ತಲೆಸುತ್ತುವ ಅನುಭವ ಉಂಟಾದರೆ ಸ್ವಲ್ಪ ಉಪ್ಪು ಬೆರಸಿದ ನೀರನ್ನು ಸೇವನೆ ಮಾಡಿ.
ಬಾದಾಮಿ ಹಾಲು
ಬಾದಾಮಿ ಹಾಲು ಕಡಿಮೆ ರಕ್ತದೊತ್ತಡ ಇರುವವರಿಗೆ ಸಹಾಯ ಮಾಡುತ್ತದೆ.
ಬಾದಾಮಿ ಹಾಲಿನಲ್ಲಿ ಕೊಲೆಸ್ಟ್ರಾಲ್‌ ಅಥವಾ ಸ್ಯಾಚುರೇಟೆಡ್‌ ಕೊಬ್ಬನ್ನು ಹೊಂದಿರುವುದಿಲ್ಲ.


ಬಾದಾಮಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಂತಹ ಆರೋಗ್ಯಕರ ಕೊಬ್ಬುಗಳನ್ನು ಹೊಂದಿದ್ದು, ಶ್ರೀಮಂತವಾಗಿದೆ.
ಕೆಲವು ಬಾದಾಮಿಗಳನ್ನು ರಾತ್ರಿಯಲ್ಲಿ ನೆನಸಿಟ್ಟು ಮರುದಿನ ಪೇಸ್ಟ್ ಮಾಡಿ, ಹಾಲಿನ ಮಿಶ್ರಣದೊಂದಿಗೆ ಸೇವನೆ ಮಾಡಬಹುದು ಅಥವಾ ಸ್ಮೂಥಿಗಳಲ್ಲಿ ಸೇರಿಸಬಹುದು.
ದ್ರವ ರೂಪದ ಪಾನೀಯಗಳು

ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ದ್ರವ ರೂಪದ ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ಪ್ರತಿದಿನ ಕನಿಷ್ಟ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು.

ವಿಶೇಷವಾಗಿ ಕಡಿಮೆ ರಕ್ತದೊತ್ತಡವನ್ನು ಹೊಂದಿರುವವರು ತೆಂಗಿನ ನೀರು, ಮಾವಿನ ಜ್ಯೂಸ್‌, ನಿಂಬೆ ಜ್ಯೂಸ್‌ಗಳನ್ನು ಸೇವನೆ ಮಾಡಬಹುದು.

ಕಡಿಮೆ ರಕ್ತದೊತ್ತಡಕ್ಕೆ ನಿರ್ಜಲೀಕರಣವು ಸಾಮಾನ್ಯ ಕಾರಣವಾಗಿದೆ.

ದಾಳಿಂಬೆ ಹಣ್ಣಿನ ಜ್ಯೂಸ್‌ಗಳಲ್ಲಿ ಪಾಲಿಫಿನಾಲ್ಸ್‌ ಎಂಬ ಉತ್ಕರ್ಷಣ ನಿರೋಧಕಗಳಲ್ಲಿ ಶ್ರೀಮಂತವಾಗಿದೆ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಕಾಫಿ
ನೀವು ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದರೆ ಕಾಫಿ ನಿಮಗೆ ಸಹಾಯ ಮಾಡಲಿದೆ.
ಅದು ಹೇಗೆಂದರೆ, ಕೆಫೀನ್‌ ರಕ್ತದೊತ್ತಡವನ್ನು ಹಠಾತ್ತನೆ ಕಡಿಮೆಯಾದಾಗ, ಚಿಕಿತ್ಸೆ ನೀಡುತ್ತದೆ.
ಒಂದು ಕಪ್‌ ಬಿಸಿ ಬಿಸಿ ಕಾಫಿ ನಿಮ್ಮ ರಕ್ತಪರಿಚಲನೆಯನ್ನು ಸುಧಾರಿಸಬಹುದು.
ಸಮತೋಲಿತ ಆಹಾರ
ಅಧಿಕ ರಕ್ತದೊತ್ತಡವಿರಲಿ, ಕಡಿಮೆ ರಕ್ತದೊತ್ತಡವಿರಲಿ ಸಮತೋಲಿತವಾದ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಪೌಷ್ಟಿಕಾಂಶ ಭರಿತ ಆಹಾರ, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಯಾವುದೇ ಕಾರಣಕ್ಕೂ ಸ್ಕಿಪ್‌ ಮಾಡಬೇಡಿ. ಇವುಗಳು ರೋಗ ನಿರೋಧಕ ಶಕ್ತಿಗಳಿಂದ ನಿಮ್ಮನ್ನು ಪಾರು ಮಾಡುತ್ತದೆ.
ಅಲ್ಲದೆ, ಬಹಳಷ್ಟು ಜನರು ಆಹಾರವನ್ನು ತ್ಯಜಿಸುತ್ತಾರೆ. ದಿನಕ್ಕೆ 3 ಬಾರಿ ಊಟ ಮಾಡುವ ಬದಲಾಗಿ 4 ಬಾರಿ ಸಣ್ಣ ಸಣ್ಣ ಭಾಗಗಳಾಗಿ ಸೇವನೆ ಮಾಡುವುದು ಉತ್ತಮ. ಹಾಗೆಯೇ ರಕ್ತದೊತ್ತಡವನ್ನು ಕಡಿಮೆ ಮಾಡುವ ಮತ್ತು ಹೆಚ್ಚಿಸುವ ಶಕ್ತಿ ಯೋಗಕ್ಕೆ ಇದೆ. ಹಾಗಾಗಿ ಪ್ರತಿನಿತ್ಯ 30 ನಿಮಿಷಗಳ ಕಾಲ ಯೋಗ ಮಾಡುವುದನ್ನು ರೂಢಿಸಿಕೊಳ್ಳಿ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಪಿಎಸ್ಐ ಅಕ್ರಮ: ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ಕುರಿತು ತನಿಖೆಯಾಗಲಿದೆ: ಸಿಎಂ ಬೊಮ್ಮಾಯಿ