ಚಿಕ್ಕಮಗಳೂರು: ದಶಕಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲ್ ಹೆಜ್ಜೆ ಸದ್ದು ಕೇಳಿ ಬಂದಿದ್ದು, ನಕ್ಸಲ್ ನಿಗ್ರಹ ಪಡೆಯಿಂದ ಸೋಮವಾರ(ನ.11) ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ಕಳಸ, ಶೃಂಗೇರಿ ಹಾಗೂ ತಾಲೂಕಿನ ವ್ಯಾಪ್ತಿಯ ದಟ್ಟ ಕಾನನದ ಮಧ್ಯೆಯಲ್ಲಿ ಕೆಂಪು ಉಗ್ರರ ಹೆಜ್ಜೆಗಾಗಿ ಕೂಂಬಿಂಗ್ ನಡೆಸಲಾಗುತ್ತಿದೆ.
ಡಾಗ್ ಸ್ಕ್ವಾಡ್ ಬಳಸಿಕೊಂಡು ಕೂಂಬಿಂಗ್ ನಡೆಸುತ್ತಿರುವ ಎಎನ್.ಎಫ್. ಪಡೆ. ಈ ನಡುವೆ ನಕ್ಸಲ್ ಮಾಹಿತಿದಾರರೆಂದು ಕೊಪ್ಪ ತಾಲೂಕಿನ ಎಡಗುಂದ ಗ್ರಾಮದ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಕಳೆದ ವಾರ ಶೃಂಗೇರಿ ತಾಲೂಕಿನ ಕಾಡಂಚಿನ ಗ್ರಾಮಕ್ಕೆ 6 ಜನ ಅಪರಿಚಿತರು ಬಂದಿದ್ದರು ಎನ್ನಲಾಗಿದೆ, ಮಲೆನಾಡ ಸಮಸ್ಯೆ ಮುಂದಿಟ್ಟುಕೊಂಡು ನಕ್ಸಲರು ಗ್ರಾಮಸ್ಥರ ಸಂಪರ್ಕ ಮಾಡಿದ್ದ ಅನುಮಾನದ ಮೇರೆಗೆ ಸೋಮವಾರ(ನ.11) ರಂದು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎ.ಎನ್.ಎಫ್. ಎಸ್ಪಿ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಕೊಪ್ಪ, ಕಳಸ ತಾಲೂಕಿನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.