ಮನೆ ಆರೋಗ್ಯ ಬಿಪಿ ಕಂಟ್ರೋಲ್‌ ಗೆ ದಿನಕ್ಕೊಂದು ಸೀಬೆಹಣ್ಣು ತಿನ್ನಿ

ಬಿಪಿ ಕಂಟ್ರೋಲ್‌ ಗೆ ದಿನಕ್ಕೊಂದು ಸೀಬೆಹಣ್ಣು ತಿನ್ನಿ

0

ವಿಟಮಿನ್ ಸಿ ಹಾಗೂ ಪೊಟ್ಯಾಶಿಯಮ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ಸೀಬೆಹಣ್ಣು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸಲು ಸಹಾಯವಾಗುತ್ತದೆ.

ನಮಗೆಲ್ಲಾ ಗೊತ್ತೇ ಇರುವ ಪೊಟ್ಯಾಶಿಯಮ್ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳು ಅಧಿಕ ರಕ್ತ ದೊತ್ತಡದ ಸಮಸ್ಯೆ ಇರುವ ರೋಗಿಗಳಿಗೆ ಬಹಳ ಒಳ್ಳೆಯದು. ಯಾಕೆಂದರೆ, ಇವು ದೇಹದಲ್ಲಿ ಶೇಖರಣೆಗೊಂಡಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ಅತ್ಯಂತ ಪರಿಣಾಮ ಕಾರಿಯಾಗಿ, ನಿಯಂತ್ರಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಸೀಬೆ ಹಣ್ಣು ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದು ಹೇಳ ಬಹುದು. ಇದಕ್ಕೆ ಮುಖ್ಯ ಕಾರಣ ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಮ್ ಅಂಶ ಕಂಡು ಬರುವುದರಿಂದ, ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಣ ಮಾಡುತ್ತದೆ.

ಸಾಧ್ಯವಾದರೆ, ಪ್ರತಿನಿತ್ಯ ಒಂದೊಂದು ಗ್ಲಾಸ್ ಸೀಬೆ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ. ಇಲ್ಲಾಂದ್ರೆ, ದಿನಕ್ಕೊಂದು ಮಧ್ಯಮ ಗಾತ್ರದ ಮಾಗಿದ ಸೀಬೆ ಹಣ್ಣು ಸೇವನೆ ಮಾಡಿದರೆ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಯಾಕೆಂದರೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಪೊಟ್ಯಾಶಿಯಮ್ ಹೇರಳವಾಗಿ ಸಿಗುವುದರಿಂದ, ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗುತ್ತದೆ.

ಇನ್ನು ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಕೇವಲ ಸೀಬೆಹಣ್ಣು ಮಾತ್ರವಲ್ಲ, ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ಅಧಿಕ ರಕ್ತದೊತ್ತಡದ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ. ಉದಾಹರಣೆಗೆ ವಿಟಮಿನ್ ಸಿ ಹಾಗೂ ಸಿಟ್ರಸ್ ಜಾತಿಗೆ ಸೇರಿದ ಹಣ್ಣುಗಳಾದ ಕಿತ್ತಳೆ ಹಣ್ಣು, ನಿಂಬೆ ಹಣ್ಣಿನ ಪಾನೀಯ, ಮೋಸಂಬಿ ಹಣ್ಣು ಅಥವಾ ಇದರ ಜ್ಯೂಸ್, ಇಲ್ಲಾಂದ್ರೆ ದಾಳಿಂಬೆ ಜ್ಯೂಸ್ ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸಿ.