ಮನೆ ಮನೆ ಮದ್ದು ಮಕ್ಕಳ ಎಳವಿಗೆ

ಮಕ್ಕಳ ಎಳವಿಗೆ

0
  1. ಮಕ್ಕಳ ಎಡವಿಗೆ ಪೇಪ್ಪರ್ ಮೆಂಟ್ ಹೂವನ್ನು ಮೆಳೆ ಕಾಳಿಂಗನ ಸೊಪ್ಪಿನ ರಸದಲ್ಲಿ ಸೇರಿಸಿ ಕುಡಿಸಿದರೆ ಎಲವು, ಶೀತ ನಿವಾರಣೆ ಆಗುವುದು.
  2. ಓಮಿನ ಹೂವು ಬೆಳ್ಳುಳ್ಳಿ ಈ ಹಿಲಕು, ಅಡಿಗೆ ಸೋಡ ಸೇರಿಸಿ ಅರೆದು ಒಲೆಯಲ್ಲಿ ಐದು ತೊಟ್ಟು ಹಾಕಿ ಜೇನು ಬೆರೆಸಿ ಕುಡಿಸಿದರೆ ನಿವಾರಣೆ ಆಗುವುದು.
  3. ಎಣ್ಣೆ ಬಿಳಿಗಾರವನ್ನು ಅರಳು ಮಾಡಿ ಒಂದು ಚಿಟಿಕೆ ಹಾಲಿನಲ್ಲಿ ಅಥವಾ ಜೇನು ಸೇರಿಸಿ,ಕುಡಿಸುವುದರಿಂದ ಗುಣವಾಗುವುದು.
  4. ತುಂಬೇರಸವನ್ನು ಹಾಲಿನಲ್ಲಿ ಹಾಕಿ ಕುಡಿಸಿದರೆ ಎಳುವು ನಿವಾರಣೆ ಆಗುವುದು
  5. ತುಳಸಿ ಸೊಪ್ಪಿನ ರಸ ತೆಗೆದು ಜೇನಿನಲ್ಲಿ ಕುಡಿಸಲು ಎಳವು ಗುಣವಾಗುವುದು.
  6. ಬಸುರಿಯಾದ ಮೂರನೇ ತಿಂಗಳು ಅಥವಾ ಐದನೇ ತಿಂಗಳು ಗಜ್ಜುಗದ ಚಿಗುರು ತಂದು ಹಸಿವಿನ ಹಾಲಿನಲ್ಲಿ ಅರೆದು ಕುಡಿಸುವುದರಿಂದ ಗರ್ಭ ನಿಲ್ಲುತ್ತದೆ.
  7. ಗರ್ಭಿಣಿಯರಾದ ಮೊದಲನೇ ತಿಂಗಳಿನಿಂದ ಪ್ರತಿದಿನ ಒಂದೊಂದು ನಿಂಬೆಹಣ್ಣನ್ನು ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ಚರ್ಮದಾ ಮಾಂಸ ಖಂಡಗಳು ಒಂದಕ್ಕೊಂದು ಬಿಗಿಯಾಗಿ,, ಗರ್ಭ ನಿಲ್ಲಲು ಸಹಾಯಕವಾಗುತ್ತದೆ.
  8. ಗರ್ಭಿಣಿಯರು ಪ್ರತಿದಿನವೂ ಹಾಲನ್ನು ಚೆನ್ನಾಗಿ ಸೇವಿಸುತ್ತಿರಬೇಕು.ಬೆಳಗ್ಗೆ ಒಂದು ಲೋಟ,ರಾತ್ರಿ ಮಲಗುವಾಗ ಒಂದು ಲೋಟ ಸಕ್ಕರೆ ಬೆರೆಸಿ ಕುಡಿಯುತ್ತಿರಬೇಕು.
  9. ಎಲ್ಲ ವಿಧವಾದ ತರಕಾರಿಗಳನ್ನು ಎಲ್ಲಾ ವಿಧವಾದ ಹಣ್ಣುಗಳನ್ನೂ ಆದಷ್ಟು ತಿನ್ನುವುದರಿಂದ ಯಾವ ದೋಷವೂ ಉಂಟಾಗುವುದಿಲ್ಲ
  10. ಮೊಳೆತ ಹೆಸರುಕಾಳು, ಕಡಲೆ ಕಾಳು, ಹುರುಳಿಕಾಳುಗಳನ್ನು ಕೋಸಂಬರಿಗಳಾಗಿ ಸೇವಿಸಬೇಕು ಹಾಗೂ ಹುಳಿ, ಸಾರು,ಪಲ್ಯದ ರೂಪದಲ್ಲಿ ತಿನ್ನುತ್ತಾ ಬರುವುದರಿಂದ ಹೆಚ್ಚಿನ ಫಲಿತಾಂಶದ ದೊರಕುವುದು.