ಮುಖದ ಚರ್ಮವು ಅತೀ ಜಿಡ್ಡಿನಿಂದ ಕಳೆಗುದಿದ್ದರೆ ಸೌತೇಕಾಯಿ ತುರಿದು ರಸ ಹಿಂಡಿ ಸಮಪ್ರಮಾಣ ನಿಂಬೆರಸ ಮತ್ತು ರೋಸ್ ವಾಟರ್ ಮಿಶ್ರ ಮಾಡಿ ನಂತರ ಮುಖಕ್ಕೆ ಲೇಪಿಸಿ ಒಂದು ಗಂಟೆಯ ನಂತರ ತಣ್ಣೀರಿನಿಂದ ತೊಳೆದರೆ ಜಿಡ್ಡಿನಂಶ ಕಡಿಮೆಯಾಗಿ ಸುಂದರವಾಗುವುದು. ಇಂದಿನ ದಿನಗಳಲ್ಲಿ ಕಲುಷಿತ ಪರಿಸರದ ವಾತಾವರಣದಲ್ಲಿ ಚರ್ಮದ ರಂದ್ರಗಳಲ್ಲಿ ಕೊಳೆಯೂ ಸೇರಿ ತನ್ನ ಅಂದವನ್ನು ಕಳೆದುಕೊಳ್ಳುತ್ತದೆ.ಕೇವಲ ಸಾಬೂನು ಉಪಯೋಗಿಸುವುದರಿಂದ ಕೊಳೆ ಸಂಪೂರ್ಣವಾಗಿ ಹೋಗುವುದಿಲ್ಲ.ಇದಕ್ಕೆ ಮೂರು ಚಮಚ ನಿಂಬೇರಸ ಮೂರು ಚಮಚ ಮೋಸಂಬಿ ರಸ ಅಥವಾ ಕಿತ್ತಲೆ ರಸ ಮೂರು ಚಮಚ ಶುದ್ದ ಗಟ್ಟಿ ಮೊಸರು ಈ ನಂತರ ಮೂರನ್ನು ಚೆನ್ನಾಗಿ ಮಿಶ್ರ ಮಾಡಿ ಮುಖ, ಕುತ್ತಿಗೆಗಳಿಗೆ ಲೇಪಿಸಿ ಒಂದು ಗಂಟೆಯ ನಂತರ ಹದವಾದ ಬಿಸಿ ನೀರಿನಿಂದ ತೊಳೆಯುವುದರಿಂದ ಚರ್ಮದಲ್ಲಿ ಅಡಗಿರುವ ಕೊಳೆಯು ಸಂಪೂರ್ಣವಾಗಿ ಹೊರಬಂದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಕಣ್ಣಿನ ರಕ್ಷಣೆ :-
ಬೇಸಿಗೆಯಲ್ಲಿ ಕಣ್ಣುಗಳು ಬಹುಬೇಗನೆ ಆಯಾಸಗೊಳ್ಳುತ್ತವೆ. ಇದರಿಂದ ಕಣ್ಣಿನ ಸುತ್ತಲೂ ನೆರಿಗೆಗಳು ಉಂಟಾಗಿ ಮುಖದ ಅಂದವನ್ನು ಕೆಡಿಸುತ್ತದೆ. ಆಯಾಸವಾದಾಗ ಟೀ, ಕಾಫಿ,ಕೋಲಾಪಾನೀಯಗಳನ್ನು ಸೇವಿಸುವ ಬದಲು ನಿಂಬೇ ಪಾನಕವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಇದರಲ್ಲಿ ಅನ್ನಾಂಗ ಸಿ ಇದ್ದು, ಕಣ್ಣಿನ ಆಯಾಸವನ್ನು ಕಳೆಯಲು ಸಹಾಯ ಮಾಡುತ್ತದೆ.ಬಿಸಿಲಿನಲ್ಲಿ ವಿರುದ್ಧವಾಗಿ ಕತ್ತಲೆ ಇರುವ ಸ್ಥಳದಲ್ಲಿ ಕುಳಿತು ಕಣ್ಣು ಮುಚ್ಚಿ ನಿಮ್ಮ ಬೆರಳುಗಳಿಂದ ಕಣ್ಣಿನ ರೆಪ್ಪೆಯನ್ನು ಸುತ್ತಲಿನ ಭಾಗವನ್ನು ಮೃದುವಾಗಿ ಉಜ್ಜಿರಿ. ಇದರಿಂದ ಕಣ್ಣಿನ ಸುತ್ತಲಿನ ನರಗಳು ಉದ್ರೇಕ ಗೊಂಡು ಹೆಚ್ಚು ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.ಪ್ರತಿ ಮುಂಜಾನೆ ಉದಯಿಸುವ ಸೂರ್ಯನನ್ನು ಮುಚ್ಚಿದ ಕಣ್ಣುಗಳಿಗೆ ಎದುರಾಗಿ ಕುಳಿತು ಸೂರ್ಯನ ಕಿರಣ ಕಣ್ಣಿನ ರೆಪ್ಪೆ ಮತ್ತು ಸುತ್ತಲೂ ಬೀಳುತ್ತಿರಲಿ.ಸುಮಾರು 15 ನಿಮಿಷದ ನಂತರ ಕಣ್ಣನ್ನು ತೆರೆದು,ಬಗ್ಗಿ ವಲಗೈಯಿಂದ ನೀರು ಎರಚುತ್ತಾ ಇರಿ.ಇದರಿಂದ ರಕ್ತದ ಸಂಚಾರವು ಕಣ್ಣಿನ ಸುತ್ತಲಿನ ನೆರಿಗೆಗಳಿಗೆ ಬಿದ್ದು ಅದು ಮಾಯವಾಗುವುದು.