- ಊಟ ಆದ 2 ಗಂಟೆಗಳ ನಂತರ ಮಲಗುವ ಮುನ್ನ ಬಿಸಿ ಹಾಲನ್ನು, ಕಡಿಮೆ ಸಕ್ಕರೆ ಬೆರೆಸಿ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿ ಆಗುವುದು.
- ಚಳಿಗೆ ಮುಖದಲ್ಲಿ ಚರ್ಮ ಒಡೆದಾಗ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಶೀಘ್ರವೇ ಒಡಕು ಮಾಯ ಆಗುವುದು.
- ಪ್ರತಿದಿನವೂ ಎದ್ದಾಗ ಒಂದು ಬಟ್ಟಲು ನೊರೆ ಹಾಲನ್ನು ದಿನವೂ ಸೇವಿಸುತ್ತಿದ್ದರೆ ಆರೋಗ್ಯ ವೃದ್ಧಿಸುವುದು.
- ಪ್ರತಿದಿನವೂ ಸೇಬು ಹಣ್ಣನ್ನು ಊಟ ಆದ ನಂತರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುವುದರೊಂದಿಗೆ ಮುಖದಲ್ಲಿ ಕಳೆ ಹೆಚ್ಚುವುದು.
- ಮಾವಿನ ಹಣ್ಣನ್ನು ದಿನವು ಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಸುವುದರೊಂದಿಗೆ ಜೀವ ಕಳೆಯೂ ಅಧಿಕಗೊಳ್ಳುವುದು.
- ದಿನವೂ ಊಟ ಆದ ನಂತರ ಬಾಳೆಹಣ್ಣು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದರೊಂದಿಗೆ,ಆರೋಗ್ಯ ವೃದ್ಧಿಸುವುದು.
- ದಿನವೂ ನೆಲ್ಲಿಕಾಯಿಯ ಮೊರಬ್ಬಾ ಸೇವನೆಯಿಂದ ಶರೀರದಲ್ಲಿ ಲವಲವಿಕೆ ಹೆಚ್ಚಾಗುವುದರೊಂದಿಗೆ ಆರೋಗ್ಯ ವೃದ್ಧಿಸುವುದು .
- ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ,ಮಕ್ಕಳಿಗೆ ಕುಡಿಸುವುದರಿಂದ ರಕ್ತ ಶುದ್ಧಿಯಾಗಿ ಆರೋಗ್ಯ ಸುಧಾರಿಸುವುದು.
- ಅಡಿಗೆ ಉಪ್ಪನ್ನು ದೇಹದ ಭಾಗಗಳಿಗೆ ತಿಕ್ಕಿ ಸ್ನಾನ ಮಾಡುವುದರಿಂದ ರಕ್ತ ಸಂಚಾರದಲ್ಲಿ ತೀವ್ರತೆ ಹೆಚ್ಚಿ, ಆರೋಗ್ಯ ವೃದ್ಧಿಸುವುದು.
- ಕಡಲೆಕಾಯಿ ಎಣ್ಣೆ ಲೇಪಿಸಿಕೊಂಡು, ದಿನವೂ ಕೆಲಕಾಲ ಎಳೆ ಬಿಸಿನಲ್ಲಿ ನಿಂತು ಸ್ನಾನ ಮಾಡುವುದರಿಂದ ಕೈಕಾಲುಗಳಿಗೆ ಶಕ್ತಿ ಹೆಚ್ಚುವುದರೊಂದಿಗೆ ಆರೋಗ್ಯ ಸುಧಾರಣೆಯು ಆಗುವುದು.
- ಕುಂಬಳಕಾಯಿಯನ್ನು ಅಡಿಗೆಯಲ್ಲಿ ವಿವಿಧ ರೀತಿಯಲ್ಲಿ ಬಳಸುವುದರಿಂದ ಆರೋಗ್ಯ ಸ್ಥಿತಿ ಸುಧಾರಿಸುವುದು.
- ಹಸಿ ಬಟಾಣಿಯನ್ನು ನೀರಿನಲ್ಲಿ ಬೇಯಿಸಿ ಉಪ್ಪು, ಬೆರೆಸದೆ ತಿನ್ನುತ್ತಿದ್ದರೆ ಆರೋಗ್ಯ ಸ್ಥಿತಿ ಸುಧಾರಿಸುವುದು.
- ಇದೇ ರೀತಿ ಬೇಯಿಸಿದ ಬಟಾಣಿಯನ್ನು ಟೊಮೇಟೊ ಹಣ್ಣಿನ ಚೂರುಗಳೊಂದಿಗೆ ಬೆರೆಸಿ ತಿನ್ನುವುದರಿಂದಲೂ ಆರೋಗ್ಯ ವೃದ್ಧಿಸುವುದು.
- ಬೂದಗುಂಬಳದ ಸೇವನೆಯಿಂದ ಆರೋಗ್ಯ ವೃದ್ಧಿಸುವುದು.
- ಮುಸುಕಿನ ಜೋಳವನ್ನು ಬರಿಯ ಹೊಟ್ಟೆಯಲ್ಲಿ ತಿನ್ನುವುದರಿಂದ ದೈಹಿಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಿಸುವುದು.
- ನೆನೆಸಿದ್ದ ರಾಗಿಯಲ್ಲಿ ಹಾಲನ್ನು ತೆಗೆದು, ಕಾಯಿಸಿ ಅದಕ್ಕೆ ಲವಂಗ, ಧಾಲ್ಚಿನಿ, ಹಾಲು ಹಾಗೂ ಸಕ್ಕರೆ ಸೇರಿಸಿ, ದಿನವೂ ಕುಡಿಯುತ್ತಿದ್ದರೆ ಶಾರೀರಿಕ ಶಕ್ತಿ ಹೆಚ್ಚುವುದರೊಂದಿಗೆ. ಆರೋಗ್ಯವೃದ್ಧಿ ಆಗುವುದು.
- ನವಿಲುಕೋಸು ಹಸಿಯಾಗಿ ತುರಿದು,ಕೊಸುಂಬರಿ ಮಾಡಿ ತಿಂದರೆ ರಕ್ತ ವೃದ್ಧಿ ಆಗುವುದರೊಂದಿಗೆ ಆರೋಗ್ಯ ವೃದ್ಧಿಯೂ ಹೆಚ್ಚುವುದು.
- ಖರ್ಜೂರದ ಹಣ್ಣನ್ನು ಬೂರಾ ಸಕ್ಕರೆಯಲ್ಲಿ ಬೆರೆಸಿ ತಿನ್ನುವುದರ ಮೂಲಕ ಬೂರಾ ಸಕ್ಕರೆಯಲ್ಲಿ ಬೆರೆಸಿ ಪಾನಕ ಮಾಡಿ ಕುಡಿಯುವುದರಿಂದ ರಕ್ತ ಸುದ್ದಿ ಆಗುವುದರೊಂದಿಗೆ ಆರೋಗ್ಯವು ಹೆಚ್ಚುವುದು.
- ಅವರೇಬೇಳೆಯೊಂದಿಗೆ ಗೋಣಿಸೊಪ್ಪನ್ನು ಸಾರು ಮಾಡಿ,ಊಟದಲ್ಲಿ ಸೇವಿಸುವುದರಿಂದ ದೇಹದಲ್ಲಿ ತಂಪು ಹೆಚ್ಚಿ. ಆರೋಗ್ಯ ಸುಧಾರಿಸುವುದು.
- ಚಪ್ಪರದವರೆಕಾಯಿ ಪಲ್ಯ ಹಾಗೂ ಬಸಿದು ಸಾರು ಮಾಡಿಕೊಂಡು ಊಟ ಮಾಡುವುದರಿಂದ ಆರೋಗ್ಯ ಸುಧಾರಿಸುವುದು.
- ಬಲಿತ ಚಕ್ರಮುನಿ ಸೊಪ್ಪನ್ನು ಚೆನ್ನಾಗಿ ಒಣಗಿಸಿ ತುಪ್ಪದಲ್ಲಿ ಹರಿದು, ಒಣಗಿದ ಮೆಣಸಿನಕಾಯಿ, ಉಪ್ಪು, ಹುಣಸೆಹಣ್ಣು ಬೆರೆಸಿ, ಕುಟ್ಟಿ ಪುಡಿ ಮಾಡಿದ ಚಟ್ನಿಪುಡಿ ಬಳಸುವುದರಿಂದ ದೈಹಿಕ ಶಕ್ತಿ ವೃದ್ಧಿಸುವುದರೊಂದಿಗೆ ಆರೋಗ್ಯ ವೃದ್ಧಿಯೂ ಆಗುವುದು.
- ದೇಹದ ಬೆಳವಣಿಗೆಯಲ್ಲಿ ಪೊಟಾಶಿಯಂ ಲವಣಗಳ ಕೊರತೆ ಇದ್ದಾಗ ತುಪ್ಪದ ಹೀರೆಕಾಯಿಯನ್ನು ಅಡಿಗೆಯಲ್ಲಿ ಬಳಸುವುದರಿಂದ ದೈಹಿಕ ಶಕ್ತಿ ಹೆಚ್ಚುವುದರೊಂದಿಗೆ ಆರೋಗ್ಯ ಸುಧಾರಣೆಯೂ ಆಗುವುದು.
- ತೊಂಡೆಕಾಯಿ ಪಲ್ಯವನ್ನು ವಾರದಲ್ಲಿ ಎರಡು ಮೂರು ಬಾರಿ ಆದರೂ ಸೇವಿಸುವುದರಿಂದ ಅನ್ನಾಂಗಗಳು ಒದಗಿ,ಆರೋಗ್ಯ ವೃದ್ಧಿಸುವುದು.
- ಸೀತಾಫಲದ ಹಣ್ಣುಗಳನ್ನು ತಿನ್ನುವುದರಿಂದ ಮಾಂಸ ಖಂಡಗಳಿಗೆ ಶಕ್ತಿ ಹೆಚ್ಚಿ, ನರ ದೌರ್ಬಲ್ಯ ಕಡಿಮೆ ಆಗುವುದರೊಂದಿಗೆ ಆರೋಗ್ಯ ಸುಧಾರಿಸುವುದು .