ಮನೆ ರಾಷ್ಟ್ರೀಯ ಫೋರ್ಬ್ಸ್: ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ

ಫೋರ್ಬ್ಸ್: ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ

0

 ಹೊಸದಿಲ್ಲಿ: ವಾಣಿಜ್ಯ ನಿಯತಕಾಲಿಕೆ ಫೋರ್ಬ್ಸ್ 2024ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ 21ನೇ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಾಗತಿಕವಾಗಿ ಪ್ರಭಾವ ಬೀರಿದ ವಿವಿಧ ರಂಗದ ಮಹಿಳಾ ಸಾಧಕಿಯರು ಈ ಪಟ್ಟಿಯಲ್ಲಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಮೂವರು ಭಾರತಿಯರು ಇದರಲ್ಲಿ ಸ್ಥಾನ ಪಡೆದಿದ್ದಾರೆ.

Join Our Whatsapp Group

 ನಿರ್ಮಲಾ ಅವರಿಗೆ ಪಟ್ಟಿಯಲ್ಲಿ 28ನೇ ಸ್ಥಾನ ಲಭಿಸಿದ್ದು, ಭಾರತೀಯರ ಪೈಕಿ ಮೊದಲಿಗರಾಗಿದ್ದಾರೆ. ಅಲ್ಲದೇ ಪಟ್ಟಿಯಲ್ಲಿ ಎಚ್‌ಸಿಎಲ್‌ ಕಾರ್ಪೋರೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಶನಿ ನಾದರ್‌ ಮಲ್ಹೋತ್ರಾ 81 ಹಾಗೂ ಬೆಂಗಳೂರು ಮೂಲದ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಮಾªರ್‌ ಶಾ 83ನೇ ಸ್ಥಾನ ಪಡೆದಿದ್ದಾರೆ. ಐರೋಪ್ಯ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್‌ಡೇರ್‌, ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ಅಧ್ಯಕ್ಷೆ ಕ್ರಿಸ್ಟೀನ್‌ ಲಗಾರ್ಡೆ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಪಟ್ಟಿಯ ಮೊದಲ 3 ಸ್ಥಾನಗಳನ್ನು ಕ್ರಮವಾಗಿ ಪಡೆದಿದ್ದಾರೆ.