ಮನೆ ಅಪರಾಧ ಮತಾಂತರಕ್ಕೆ ಒತ್ತಾಯ: ಪತ್ನಿ ವಿರುದ್ಧವೇ ದೂರು ನೀಡಿದ ಪತಿ

ಮತಾಂತರಕ್ಕೆ ಒತ್ತಾಯ: ಪತ್ನಿ ವಿರುದ್ಧವೇ ದೂರು ನೀಡಿದ ಪತಿ

0

ಬೆಂಗಳೂರು(Bengaluru) : ಪ್ರೀತಿಸಿ ಮದುವೆಯಾದ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದಾಳೆಂದು ಆರೋಪಿಸಿ ಪತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ನಿವಾಸಿ ದೀಪಕ್ ತನ್ನ ಪತ್ನಿ ಸುನಿತಾ ಗ್ರೇಸಿ ಮೇಲೆ ದೂರು ನೀಡಿದ್ದಾರೆ. ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡುತ್ತಿದ್ದಾಳೆ. ಇದಕ್ಕೆ ಒಪ್ಪದಿದ್ದಾಗ ನಾನಾ ರೀತಿಯಲ್ಲಿ ಕಿರುಕುಳ ಕೊಟ್ಟು ಕಾಣೆಯಾಗಿದ್ದಾನೆಂದು ಸುಳ್ಳು ದೂರುಗಳನ್ನ ನೀಡುತ್ತಿದ್ದಾಳೆಂದು ಪತಿ ಆರೋಪಿಸಿದ್ದಾನೆ. ಅಲ್ಲದೆ, ತನ್ನ ಕುಟುಂಬಸ್ಥರಿಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯ, ಜೀವ ಬೆದರಿಕೆ ಹಾಕಿದ್ದಾರೆಂದು ದೀಪಕ್ ದೂರಿದ್ದಾರೆ.

ಇನ್ನು ಪ್ರಕರಣದ ಕುರಿತು ಸುನೀತಾ ಗ್ರೇಸಿ ಹಾಗೂ ಆಕೆಯ ಸಂಬಂಧಿಕರಾದ ಶೋಭಾ ದಯಾನಿಧಿ, ತಮಿಳ್ ಮಣಿ, ಅಂತೋಣಿ ವಿರುದ್ಧ ದೀಪಕ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ದೀಪಕ್ ತನ್ನ ಹೆಂಡತಿ ಸೇರಿದಂತೆ ಆಕೆಯ ಸಂಬಂಧಿಕರು ಮತಾಂತರವಾಗುವಂತೆ ತಮಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಉಲ್ಲೇಖಿಸಿದ್ದಾರೆ.