ಬೆಂಗಳೂರು: ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹೇರಿದ್ದಕ್ಕೆ ಇತ್ತೀಚೆಗೆ ಸಹೋದ್ಯೋಗಿಯನ್ನು ಕೊಲೆ ಮಾಡಿದ್ದ ವಾರಣಾಸಿಯ 22 ವರ್ಷದ ಫ್ಯಾಬ್ರಿಕ್ ತಯಾರಕನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದಿಲ್ಖುಷ್ ಎಂದು ಗುರುತಿಸಲಾಗಿದ್ದು, ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಖುಷ್ ಉತ್ತರ ಪ್ರದೇಶದ ಬರೇಲಿಯ ಮುರ್ಷಿದಾಬಾದ್ ಗ್ರಾಮದ ಗುಲ್ಫಾಮ್ ಅವರೊಂದಿಗೆ ಫ್ಯಾಬ್ರಿಕೇಟರ್ ಆಗಿ ದೇವರಚಿಕ್ಕನಹಳ್ಳಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚು ಕೆಲಸದ ಅನುಭವವಿದೆ ಎಂದು ಹೇಳಿಕೊಂಡಿದ್ದ ಗಲ್ಫಾಮ್, ಹೆಚ್ಚು ಕೆಲಸ ಮಾಡುವಂತೆ ದಿಲ್ಖುಷ್ ಮೇಲೆ ಒತ್ತಡ ಹೇರುತ್ತಿದ್ದ. ಕೆಲಸದ ಸಮಯದ ಬಗ್ಗೆ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ.
ಇದರಿಂದ ಆಕ್ರೋಶಗೊಂಡ ದಿಲ್ಖುಷ್ ಕಟ್ಟಡದಲ್ಲಿ ಮಲಗಿದ್ದಾಗ ಗಲ್ಫಾಮ್‌ನ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದು. ನಗರದಲ್ಲಿ ನೆಲೆಸಿದ್ದ ಗಲ್ಫಾಮ್‌ನ ಸಂಬಂಧಿಯೊಬ್ಬರು ನಾಪತ್ತೆಯಾಗಿರುವ ಕುರಿತು ಬೇಗೂರು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧದ ನಂತರ ದಿಲ್ಖುಷ್ ವಾರಣಾಸಿಗೆ ತೆರಳಿದಾಗ ಪೊಲೀಸರಿಗೆ ಅನುಮಾನ ಬಂದಿತ್ತು. 24 ಗಂಟೆಗಳಲ್ಲಿ ಪೊಲೀಸ್ ಸಿಬ್ಬಂದಿ ವಾರಣಾಸಿಗೆ ತೆರಳಿ ದಿಲ್ಖುಷ್ ಅವರನ್ನು ಬಂಧಿಸಿದರು. ತನಿಖೆಯ ಸಮಯದಲ್ಲಿ, ದಿಲ್ಖುಷ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಹೆಚ್ಚು ಕೆಲಸ ಮಾಡುವಂತೆ ಒತ್ತಡ ಅನುಭವಿಸಿದ ಕಾರಣ ಗಲ್ಫಾಮ್ ಅನ್ನು ಕೊಂದಿರುವುದಾಗಿ ಹೇಳಿದರು. ಬೇಗೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.