ಮನೆ ಕ್ರೀಡೆ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮಾಜಿ ನಾಯಕ ಟಿಮ್ ಪೇನ್‌ ಎಲ್ಲಾ ಮಾದರಿ ಕ್ರಿಕೆಟ್ ಗೆ ನಿವೃತ್ತಿ

ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮಾಜಿ ನಾಯಕ ಟಿಮ್ ಪೇನ್‌ ಎಲ್ಲಾ ಮಾದರಿ ಕ್ರಿಕೆಟ್ ಗೆ ನಿವೃತ್ತಿ

0

ಸಿಡ್ನಿ (ಎಎಫ್‌’ಪಿ): ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮಾಜಿ ನಾಯಕ ಟಿಮ್ ಪೇನ್‌ ಅವರು ಕ್ರಿಕೆಟ್‌’ನ ಎಲ್ಲ ಮಾದರಿಗಳಿಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದರು.

38 ವರ್ಷದ ಪೇನ್‌ ಅವರು ಆಸ್ಟ್ರೇಲಿಯಾ ದೇಸಿ ಕ್ರಿಕೆಟ್‌ನಲ್ಲಿ ತಾಸ್ಮೇನಿಯಾ ತಂಡದ ಪರ ಶುಕ್ರವಾರ ಕೊನೆಯ ಪಂದ್ಯ ಆಡಿದರು.

2018 ರಿಂದ 2021 ರ ಅವಧಿಯಲ್ಲಿ ಅವರು 23 ಟೆಸ್ಟ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ 11 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ಒಲಿದಿತ್ತು. ಎಂಟರಲ್ಲಿ ಸೋತಿದ್ದರೆ, ನಾಲ್ಕನ್ನು ಡ್ರಾ ಮಾಡಿಕೊಂಡಿತ್ತು.

35 ಟೆಸ್ಟ್‌ಗಳಲ್ಲಿ ಆಡಿರುವ ಅವರು 32.63ರ ಸರಾಸರಿಯಲ್ಲಿ 1,534 ರನ್‌ ಕಲೆಹಾಕಿದ್ದಾರೆ. 9 ಅರ್ಧಶತಕಗಳನ್ನು ಗಳಿಸಿರುವ ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್‌ 92 ಆಗಿದೆ. 35 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 890 ರನ್‌ ಪೇರಿಸಿದ್ದಾರೆ.

ಹಿಂದಿನ ಲೇಖನಮಾ.೧೮ ರಂದು ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ
ಮುಂದಿನ ಲೇಖನಅರಮನೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದು