ಮೈಸೂರು(Mysuru): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆಂಬಲಿಗರ ವಾಹನಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ ನಗರದ ಕೊಲಂಬಿಯಾ ಏಷ್ಯಾ ವೃತ್ತದ ಬಳಿ ನಡೆದಿದೆ.
ವೀರ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಿದ್ದ ವೇಳೆ ಅವರ ಹಿಂದೆ ಸಾಗುವ ಬರದಲ್ಲಿ ಬೆಂಬಲಿಗರ ವಾಹನ ಪರಸ್ಪರ ಡಿಕ್ಕಿಯಾಗಿದೆ.
ಕೆಎಸ್’ಐಐಡಿಸಿ ನಿರ್ದೇಶಕ ಮಹದೇವಸ್ವಾಮಿ ಹಾಗೂ ಬಿಜೆಪಿ ಮುಖಂಡ ಸಂದೇಶ್ ಗೆ ಸೇರಿದ ಇನೋವಾ ಕಾರುಗಳಿಗೆ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಬಿಜೆಪಿ ಮುಖಂಡ ಸಂದೇಶ್ ಹಾಗೂ ಕೆಎಸ್’ಐಐಡಿಸಿ ನಿರ್ದೇಶಕ ಮಹದೇವಸ್ವಾಮಿ ವಾಗ್ವಾದಕ್ಕೆ ಇಳಿದರು. ಈ ವೇಳೆ ಪೊಲಿಸರು ಮಧ್ಯೆ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.
ಎನ್.ಆರ್. ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.














