ಮನೆ ಅಂತಾರಾಷ್ಟ್ರೀಯ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಗುಂಡೇಟು: ಆಸ್ಪತ್ರೆಗೆ ದಾಖಲು- ಶಂಕಿತ ವ್ಯಕ್ತಿಯ ಬಂಧನ

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಗುಂಡೇಟು: ಆಸ್ಪತ್ರೆಗೆ ದಾಖಲು- ಶಂಕಿತ ವ್ಯಕ್ತಿಯ ಬಂಧನ

0

‌ಟೊಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಂಡೇಟು ತಗುಲಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಸ್ಥಳೀಯ ಸುದ್ದಿ ಮಾಧ್ಯಮ ‘ಎನ್‌ಎಚ್‌ಕೆ’ ಶುಕ್ರವಾರ ವರದಿ ಮಾಡಿದ್ದು, ಗುಂಡೇಟು ತಗುಲಿ ಗಾಯಗೊಂಡು ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಶಿಂಜೊ ಅಬೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಲಾಗಿದೆ.

ಕಾರ್ಯಕ್ರಮದ ವೇಳೆ ಗುಂಡು ಹಾರಿದ ಶಬ್ದ ಕೇಳಿಸಿದ್ದು, ಕ್ಷಣಾರ್ಧದಲ್ಲಿ ಅಬೆ ರಕ್ತಸ್ರಾವದಿಂದ ನೆಲಕ್ಕೆ ಬಿದ್ದರು ಎಂದು ಸುದ್ದಿ ಬಿತ್ತರ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಎನ್‌ಎಚ್‌ಕೆ ತಿಳಿಸಿದೆ.