ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಸಿಇಒ ಚಿತ್ರಾ ರಾಮಕೃಷ್ಣಅವರನ್ನು ಎನ್ಎಸ್ಇ ಕೊ-ಲೊಕೇಶನ್ ಹಗರಣ ಪ್ರಕರಣದಲ್ಲಿ ಸಿಬಿಐ ಕಳೆದ ಭಾನುವಾರ ತಡರಾತ್ರಿ ಬಂಧಿಸಿದೆ.
ಚಿತ್ರಾ ರಾಮಕೃಷ್ಣ ಅವರನ್ನು ನಿನ್ನೆ ದೆಹಲಿಯಲ್ಲಿ ಬಂಧಿಸಿ ನಂತರ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಸಿಬಿಐ ಕೇಂದ್ರ ಕಚೇರಿಯ ಲಾಕಪ್ ನಲ್ಲಿ ಇರಿಸಲಾಯಿತು.
ಸತತ ಮೂರು ದಿನಗಳ ಕಾಲ ಚಿತ್ರಾ ರಾಮಕೃಷ್ಣ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಅವರ ನಿವಾಸದಲ್ಲಿ ಕೂಡ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಆ ಸಮಯದಲ್ಲಿ ಅವರು ಸರಿಯಾದ ಉತ್ತರ ನೀಡಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರೀಯ ತನಿಖಾ ಸಂಸ್ಥೆಯು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಹಿರಿಯ ಮನ:ಶಾಸ್ತ್ರಜ್ಞರ ಸೇವೆಯನ್ನು ಬಳಸಿಕೊಂಡಿದೆ ಎಂದು ಹೇಳಿದರು. ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸುವುದು ಬಿಟ್ಟರೆ ಬೇರೆ ಯಾವುದೇ ಸಾಧ್ಯತೆಗಳು ಇರಲಿಲ್ಲ, ಈ ನಿಟ್ಟಿನಲ್ಲಿ ಸಿಬಿಐ ಕೋರ್ಟ್ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಸಿಬಿಐ ವಿಶೇಷ ನ್ಯಾಯಾಲಯ ಮೊನ್ನೆ ಶನಿವಾರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ದೆಹಲಿ ಮೂಲದ ಸ್ಟಾಕ್ ಬ್ರೋಕರ್ ವಿರುದ್ಧ 2018ರಿಂದ ಕೊ ಲೊಕೇಶನ್ ಹಗರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಸೆಬಿ ವರದಿಯ ನಂತರ ಎನ್‌ಎಸ್‌ಇಯ ಆಗಿನ ಉನ್ನತ ಅಧಿಕಾರಿಗಳು ಹೇಳುತ್ತಿದ್ದಾರೆ.
ಚಿತ್ರಾ ರಾಮಕೃಷ್ಣ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು 2016ರಲ್ಲಿ ತೊರೆದಿದ್ದರು.