ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಮೊಮ್ಮಗಳು, ಅಮೆರಿಕದ ಪತ್ರಕರ್ತೆ ಟಟಿಯಾನಾ ಸ್ಕ್ಲೋಸ್‌ಬರ್ಗ್ ಅವರು ತಮ್ಮ 35ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.
ನಮ್ಮ ಸುಂದರ ಟಟಿಯಾನಾ ಇಂದು ಬೆಳಗ್ಗೆ ನಿಧನರಾದರು. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ ಎಂದು ಕುಟುಂಬವು ಜೆಎಫ್‌ಕೆ ಲೈಬ್ರರಿ ಫೌಂಡೇಶನ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದೆ.
ಟಟಿಯಾನಾ ಅವರು ಶ್ಲೋಸ್‌ಬರ್ಗ್ ವಿನ್ಯಾಸಕ ಎಡ್ವಿನ್ ಶ್ಲೋಸ್‌ಬರ್ಗ್ ಮತ್ತು ರಾಜತಾಂತ್ರಿಕ ಕ್ಯಾರೋಲಿನ್ ಕೆನಡಿ ಅವರ ಪುತ್ರಿ. ತಾವು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಇತ್ತೀಚೆಗೆ ಟಟಿಯಾನಾ ಹೇಳಿಕೊಂಡಿದ್ದರು. ಒಂದು ವರ್ಷಕ್ಕಿಂತ ಕಡಿಮೆ ಅವಧಿ ವರೆಗೆ ಬದುಕಿರುತ್ತೇನೆಂದು ಇತ್ತೀಚೆಗೆ ಹೇಳಿಕೊಂಡಿದ್ದರು.
ಕೀಮೋಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಸೇರಿದಂತೆ ತಾನು ಪಡೆದ ಚಿಕಿತ್ಸೆಗಳನ್ನು ಸ್ಕ್ಲೋಸ್‌ಬರ್ಗ್ ವಿವರಿಸಿದ್ದರು. ಇವರ ಕುಟುಂಬದ ಸದಸ್ಯರು ದುರಂತಗಳಿಂದೇ ಸಾವಿಗೀಡಾಗುತ್ತಿದ್ದಾರೆ.
ಟಟಿಯಾನಾ ಅವರು ತಮ್ಮ ಸಂಬಂಧಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರನ್ನೂ ತೀವ್ರವಾಗಿ ಟೀಕಿಸಿದ್ದರು. ಅವರು ಈಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದಲ್ಲಿ ಆರೋಗ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.















