ಮನೆ ಆರೋಗ್ಯ ದೇಶದಲ್ಲಿ ಓಮೈಕ್ರಾನ್‌‘ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣ ಪತ್ತೆ

ದೇಶದಲ್ಲಿ ಓಮೈಕ್ರಾನ್‌‘ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣ ಪತ್ತೆ

0

ನವದೆಹಲಿ(Newdelhi): ದೇಶದಲ್ಲಿ ಕೊರೊನಾ ವೈರಸ್‌ ಓಮೈಕ್ರಾನ್‌‘ನ ಉಪತಳಿ ಬಿಎಫ್‌.7 ಸೋಂಕಿನ ನಾಲ್ಕು ಪ್ರಕರಣಗಳು ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್‌’ನಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ. ಗುಜರಾತ್‌ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣಗಳನ್ನು ಪತ್ತೆ ಮಾಡಿತು. ಎರಡು ಮತ್ತು ಮೂರನೇ ಪ್ರಕರಣವೂ ಗುಜರಾತ್‌’ನಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣ ಒಡಿಶಾದಲ್ಲಿ ವರದಿಯಾಗಿದೆ.

ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್‌–19 ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ವೈರಸ್‌’ನ ಈ ಬಿಎಫ್‌.7 ಉಪತಳಿಯೇ ಕಾರಣ ಎನ್ನಲಾಗಿದೆ.

ಮಧುಮೇಹಿಗಳು ಮಾಸ್ಕ್ ಧರಿಸಿ

ಕೋವಿಡ್‌–19 ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು (ಕೋಮಾರ್ಬಿಡಿಟಿ), ವಯಸ್ಸಾದವರು ಜನಜಂಗುಳಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್‌ ಸಲಹೆ ನೀಡಿದ್ದಾರೆ.