ಮನೆ ಅಂತಾರಾಷ್ಟ್ರೀಯ ಭಾರತದ ವಾಯುಪಡೆಯಿಂದ ಪಾಕಿಸ್ತಾನದ ನಾಲ್ಕು ಫೈಟರ್ ಜೆಟ್‌ಗಳು ಧ್ವಂಸ!

ಭಾರತದ ವಾಯುಪಡೆಯಿಂದ ಪಾಕಿಸ್ತಾನದ ನಾಲ್ಕು ಫೈಟರ್ ಜೆಟ್‌ಗಳು ಧ್ವಂಸ!

0

ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪಾಕಿಸ್ತಾನದ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿ ಈಗಾಗಲೇ ಪಾಕಿಸ್ತಾನಕ್ಕೆ ನುಗ್ಗಿ ಭಾರತ ಸೇನೆ ತಕ್ಕ ಪಾಠ ಕಲಿಸಿದೆ. ಆದರೂ ಕೂಡ ಪಾಕಿಸ್ತಾನ ತನ್ನ ಬುದ್ಧಿ ಬಿಡದೆ ಮತ್ತೆ ಗಡಿಯಲ್ಲಿ ಶೆಲ್ ದಾಳಿ ನಡೆಸುತ್ತಿದೆ. ಇದೀಗ ಪಾಕಿಸ್ತಾನದ ನಾಲ್ಕು ಫೈಟರ್ ವಿಮಾನಗಳನ್ನು ಭಾರತ ಸೇನೆ ಹೊಡೆದುರುಳಿಸಿದೆ.

ಹೌದು ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ F16 ಎರಡು, ಹಾಗು F17 ಎರಡು ಫೈಟರ್ ಜೆಟ್ ವಿಮಾನಗಳನ್ನು ಭಾರತೀಯ ಸೇನೆ ಇದೀಗ ಹೊಡೆದುರುಳಿಸಿದೆ. ಈ ಮೂಲಕ ಪಾಕಿಸ್ತಾನದ ನಾಲ್ಕು ಜೆಟ್ ಗಳನ್ನು ಸೇನೆ ಹೊಡೆದುರುಳಿಸಿದೆ.

ಇನ್ನು ಭಾರತ ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಸಚಿವೆ ಸಕೀನಾ ಇಟೂ ಈ ಕುರಿತು ಹೇಳಿಕೆ ನೀಡಿದ್ದಾರೆ.