ಮನೆ ರಾಷ್ಟ್ರೀಯ ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಗೊಂಡು ನಾಲ್ವರು ಮೃತ್ಯು, 13 ಮಂದಿಗೆ ಗಾಯ

ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಗೊಂಡು ನಾಲ್ವರು ಮೃತ್ಯು, 13 ಮಂದಿಗೆ ಗಾಯ

0

ಜಾರ್ಖಂಡ್: ಮೊಹರಂ ಹಬ್ಬದ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಗೊಂಡು ನಾಲ್ವರು ಮೃತಪಟ್ಟು ಹದಿಮೂರು ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್ ನ ಬೊಕಾರೊದಲ್ಲಿ ಶನಿವಾರ ಸಂಭವಿಸಿದೆ.

Join Our Whatsapp Group

ಮೊಹರಂ ಹಬ್ಬದ ನಿಮಿತ್ತ ಗುಜರಾತ್‌ ನ ಜಾಮ್‌ ನಗರದಲ್ಲಿ ತಾಜಿಯಾ ಮೆರವಣಿಗೆ ನಡೆಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡಿದೆ. ಈ ವೇಳೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಅಲ್ಲದೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಹದಿಮೂರು ಮಂದಿ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಬೊಕಾರೊ ಥರ್ಮಲ್ ಡಿವಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದು, ಈ ವೇಳೆ ತಾಜಿಯ ಎತ್ತಿಕೊಂಡು ಮೆರವಣಿಗೆ ನಡೆಸುತ್ತಿದ್ದ ವೇಳೆ 11,000 ವೋಲ್ಟ್ ಹೈ ಟೆನ್ಷನ್ ತಂತಿ ಸ್ಪರ್ಶಗೊಂಡು ಮೆರವಣಿಗೆಗೆ ಬಳಸಿದ್ದ ಬ್ಯಾಟರಿಗಳು ಸ್ಪೋಟಗೊಂಡಿದೆ ಇದರಿಂದ ಹೆಚ್ಚಿನ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಹಿಂದಿನ ಲೇಖನಕಾರು ಅಡ್ಡಗಟ್ಟಿ ದರೋಡೆ: ಮೊಬೈಲ್, ಮಾಂಗಲ್ಯ ಸರ ಕಿತ್ತು ಪರಾರಿ
ಮುಂದಿನ ಲೇಖನಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: ಆರು ಮಂದಿ ಸಾವು, 20 ಮಂದಿಗೆ ಗಾಯ