ತೀರ್ಥಹಳ್ಳಿ: ಆನ್ಲೈನ್ ಸ್ಕ್ಯಾನ್ ಮಾಡಿ ಹಣ ಕೊಡುವುದಾಗಿ ನಂಬಿಸಿ 5000 ರೂ. ಹಣವನ್ನು ತೆಗೆದುಕೊಂಡು ಹೋಗಿ, ಹಣವನ್ನ ಟ್ರಾನ್ಸ್ಫರ್ ಮಾಡಿದ ರೀತಿಯಲ್ಲಿ ನಾಟಕ ಮಾಡಿ ವಂಚಿಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಪಟ್ಟಣದ ಗಾಂಧಿಚೌಕದ ಕರ್ನಾಟಕ ಬ್ಯಾಂಕ್ ಎಟಿಎಂ ಪಕ್ಕದ ಮೊಬೈಲ್ ಅಂಗಡಿಯಲ್ಲಿಅನಾಮಿಕ ವ್ಯಕ್ತಿಯೋರ್ವ ಕ್ಯಾಶ್ ಬೇಕೆಂದು ನಿಮಗೆ ಗೂಗಲ್ ಪೇ ಮಾಡುತ್ತೇನೆ ಎಂದು ಹಣವನ್ನ ಪಡೆದು ಮೊಬೈಲ್ ಮೂಲಕ ಅಕೌಂಟ್ ಯುಪಿಐ ಸ್ಕ್ಯಾನ್ ಮಾಡಿದ್ದಾನೆ. ನಂತರ ಹಣ ವರ್ಗಾವಣೆ ಆಗಿರುವ ಬಗ್ಗೆ ಟ್ರಾನ್ಸ್ಫರ್ ಎಂದು ಡಿಸ್ಪ್ಲೇಯಲ್ಲಿ ಬಂದಿದ್ದನ್ನು ತೋರಿಸಿ ಮಾಹಿತಿಯನ್ನು ನೀಡಿದ್ದಾನೆ. ಹಾಗಾಗಿ ಹಣವನ್ನು ಆ ವ್ಯಕ್ತಿಗೆ ನೀಡಲಾಗಿತ್ತು. ಆದರೆ ಆತ ಹಣವನ್ನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡದೆ ಡಿಜಿಟಲ್ ಮೋಸವನ್ನು ಮಾಡಿದ್ದಾನೆ.
ತಿಪ್ಪೇಸ್ವಾಮಿ ಎಂಬ ಹೆಸರನ್ನು ಆತ ಹೇಳಿಕೊಂಡಿದ್ದು, ಆತ ಯಾರು ಎಂಬ ಸ್ಪಷ್ಟತೆ ದೊರೆತಿಲ್ಲ.
ಈಗಾಗಲೇ ಡಿಜಿಟಲ್ ವ್ಯವಹಾರದ ಬಗ್ಗೆ ತೀವ್ರ ಗಮನವಹಿಸಿ ಎಂದು ಪೊಲೀಸರು ಎಷ್ಟೇ ತಿಳಿಸಿದರು ಸಹ ಜನ ಅದರ ಬಗ್ಗೆ ಎಚ್ಚೆತ್ತಿಲ್ಲ. ಆದಷ್ಟು ಈ ಬಗ್ಗೆ ಜನರು ಡಿಜಿಟಲ್ ವ್ಯವಹಾರದ ಬಗ್ಗೆ ಗಮನ ಹರಿಸಬೇಕಾಗಿದೆ.