ಮನೆ ಅಪರಾಧ ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ

ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ

0

ಬೆಂಗಳೂರು: ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ರವಿ, ನವೀನ್ ಕುಮಾರ್, ಗೂರ್ ಅಹ್ಮದ್, ಅಬ್ದುಲ್ ದಸ್ತಗಿರ್ ಬಂಧಿತರು.

ಲಕ್ಷ್ಮೀನಾರಾಯಣಗೆ ಕರೆ ಮಾಡಿ ಮಾತನಾಡಲು ಆರೋಪಿ ರವಿ ಕರೆಸಿಕೊಂಡಿದ್ದ. ಏರ್​ಪೋರ್ಟ್​ನ ಖಾಸಗಿ ಹೋಟೆಲ್​  ನಲ್ಲಿ ಆರೋಪಿಗಳು ಭೇಟಿ ಮಾಡಿದ್ದರು. ಈ ವೇಳೆ ಡೈಮಂಡ್ ವ್ಯವಹಾರ ಮಾಡುವುದಾಗಿ ತಿಳಿಸಿದ್ದರು. 10 ಕೋಟಿ ರೂ. ಮೌಲ್ಯದ ವಜ್ರವನ್ನು 3 ಕೋಟಿ ರೂ. ಕೊಡುವುದಾಗಿ ಹೇಳಿದ್ದ. ದೂರುದಾರ ಲಕ್ಷ್ಮೀನಾರಾಯಣಗೆ ನಕಲಿ ವಜ್ರ ಅನ್ನೋದು ಗೊತ್ತಾಗಿತ್ತು.

ಕೂಡಲೇ ಬಿಐಎಎಲ್​ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಹಿಂದಿನ ಲೇಖನಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ: ಸರ್ಕಾರದ ಸುತ್ತೋಲೆ ಪಾಲಿಸದ ಸಂಸ್ಥೆಗಳನ್ನು ಮುಚ್ಚಬಾರದು ಎಂದ ಹೈಕೋರ್ಟ್
ಮುಂದಿನ ಲೇಖನರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹೊಣೆಗೇಡಿ, ಲೂಟಿ ಸರ್ಕಾರ: ಪ್ರಧಾನಿ ಮೋದಿ