ಮನೆ ಅಪರಾಧ ರಾಯಚೂರಿನಲ್ಲಿ ದೇವರ ಹೆಸರಲ್ಲಿ ವಂಚನೆ: ಮಂತ್ರಾಲಯ ಮಠದ ಹೆಸರಿನಲ್ಲಿ ಆನ್‌ಲೈನ್ ತೋಳಾಟ, ಭಕ್ತಿಗೆ 2000 ನಷ್ಟ

ರಾಯಚೂರಿನಲ್ಲಿ ದೇವರ ಹೆಸರಲ್ಲಿ ವಂಚನೆ: ಮಂತ್ರಾಲಯ ಮಠದ ಹೆಸರಿನಲ್ಲಿ ಆನ್‌ಲೈನ್ ತೋಳಾಟ, ಭಕ್ತಿಗೆ 2000 ನಷ್ಟ

0

ರಾಯಚೂರು : ದೇವರ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಹಣದಾಹಕ್ಕೆ ಕಿಡಿಗೇಡಿಗಳು ಅಮಾಯಕ ಭಕ್ತರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ.

ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಓರ್ವ ಭಕ್ತರಿಗೆ ಕಿಡಿಗೇಡಿಗಳು ವಂಚಿಸಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಂತ್ರಾಲಯ ಮಠದ ವಿಜಯೇಂದ್ರ ವಸತಿ ಗೃಹದ ಹೆಸರಿನಲ್ಲಿ ಆನ್‌ಲೈನ್ ಬುಕಿಂಗ್ ಮೂಲಕ ಮುಂಗಡವಾಗಿ ಎರಡು ಸಾವಿರ ರೂ ಪಡೆದು ವಂಚಿಸಲಾಗಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷಿತಾ ಎಂಬುವರಿಗೆ ಆನ್​​ಲೈನ್​​ ಬುಕ್ಕಿಂಗ್​ ಹೆಸರಲ್ಲಿ ಮುಂಗಡವಾಗಿ 2000 ರೂ. ಜಮೆ ಮಾಡಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡದೆ ವಂಚಿಸಲಾಗಿದೆ.

ಘಟನೆ ಬಗ್ಗೆ ಆಡಳಿತ ಮಂಡಳಿ ಕಳವಳ ವ್ಯಕ್ತ ಪಡಿಸಿದೆ. ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಶ್ರೀ ಮಠದ ಪ್ರತಿ ವಸತಿ ಗೃಹಗಳ ಬುಕ್ಕಿಂಗ್​ಗೆ www.srsmatha.org. ಮೂಲಕ ಮಾತ್ರ ಬುಕ್ಕಿಂಗ್ ಮಾಡಿಕೊಳ್ಳುವಂತೆ ಭಕ್ತರಿಗೆ ಸಲಹೆ ನೀಡಿದೆ.