ಹುಬ್ಬಳ್ಳಿ: ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಳೇಹುಬ್ಬಳ್ಳಿಯ ನೇಕಾರ ನಗರದ ಓರ್ವ ವ್ಯಕ್ತಿಯಿಂದ 31 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ ವಿಜಯಪುರ ಮೂಲದ ಪ್ರಶಾಂತ್ ದೇಶಪಾಂಡೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನನಗೆ ರೈಲ್ವೇ ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದಾರೆ. ನಾನು ಈಗಾಗಲೆ ಅನೇಕ ಜನರಿಗೆ ನೌಕರಿ ಕೊಡಿಸಿದ್ದೇನೆ ಎಂದು ಸುಳ್ಳು ನೇಮಕಾತಿ ಪತ್ರ ಮತ್ತು ಜಾಯ್ನಿಂಗ್ ಲೆಟರ್ ತೋರಿಸಿ ನಂಬಿಸಿದ್ದಾನೆ. ನಂತರ ನಿನಗು ಕೆಲಸ ಕೊಡಿಸುವುದಾಗಿ ಹೇಳಿ ನೇಕಾರನಗರದ ಓರ್ವ ವ್ಯಕ್ತಿಗೆ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ.
ಸದ್ಯ ಪ್ರಶಾಂತ ದೇಶಪಾಂಡೆ ವಿರುದ್ಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube