ಮನೆ ಸ್ಥಳೀಯ ಉಚಿತ ಮೇವಿನ ಪೊಟ್ಟಣ ವಿತರಣೆ

ಉಚಿತ ಮೇವಿನ ಪೊಟ್ಟಣ ವಿತರಣೆ

0

ಮೈಸೂರು: ಇಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮ ಪಂಚಾಯತಿ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖಾ ವತಿಯಿಂದ ರೈತರಿಗೆ ಉಚಿತವಾಗಿ ಮೇವಿನ ಬೆಳೆ ಬೆಳೆಸಿಕೊಳ್ಳಲು ತಲಾ 5 ಕೆಜಿಯ ಕಿರು ಮೇವಿನ ಪೋಟ್ಟಣಗಳನ್ನು ಡಾ. ಯತೀಂದ್ರ ಸಿದ್ದರಾಮಯ್ಯ ರವರು ಮೇವಿನ ಕಿರು ಪೊಟ್ಟಣ ಗಳನ್ನು ವಿತರಣೆ ಮಾಡಿದರು.

ಬರ ನಿರ್ವಹಣೆಗೆ ಪಶುಪಾಲನ ಇಲಾಖೆ ವತಿಯಿಂದ ಉಚಿತವಾಗಿ ನೀಡುತ್ತಿರುವ ಮೇವಿನ ಬೀಜದಲ್ಲಿ ಮೇವನ್ನ ಬೆಳೆದು ರೈತರು ತಮ್ಮ ಜಾನುವಾರುಗಳನ್ನ ಬರ ಪರಿಸ್ಥಿತಿಯ ಸಂದರ್ಭದಲ್ಲಿ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ, ನಾಗರಾಜುರವರು ಡಾ ಯತಿಂದ್ರ ಸಿದ್ದರಾಮಯ್ಯ ರವರನ್ನ ಹಾಗೂ ಪಶುಸಂಗೋಪನಾ ಇಲಾಖೆ ಸಚಿವರಾದ ಕೆ ವೆಂಕಟೇಶ್ ಅವರು ಮೇವಿನ ಬೀಜವನ್ನ  ಮಳೆ ಬಂದಿರುವ ಈ ಸಂದರ್ಭದಲ್ಲಿ ತ್ವರಿತವಾಗಿ ಮೇವಿನ  ಬೀಜ ಸರಬರಾಜು ಮಾಡಿಸಿಕೊಟ್ಟಿರುವುದಕ್ಕೆ ಇಲಾಖೆ  ಪರವಾಗಿ ಧನ್ಯವಾದಗಳನ್ನ ತಿಳಿಸಿದರು.

ಈ ಸಂದರ್ಭದಲ್ಲಿ ನರಸೀಪುರ ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ, ಲಿಂಗರಾಜು, ಗರ್ಗೇಶ್ವರಿ ಪಶು ಚಿಕಿತ್ಸಾಲಯದ ಪಶು ವೈದ್ಯರಾದ ಡಾ, ಜ್ಯೋತಿಲಕ್ಷ್ಮಿ ರವರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸಾಂಕೇತಿಕವಾಗಿ ಸುಮಾರು 30 ರೈತರಿಗೆ ಮೇವಿನ ಬೀಜದ ಕಿರುಪೋಟ್ಟಣಗಳನ್ನು ವಿತರಣೆ ಮಾಡಲಾಯಿತು.

ಹಾಗೂ ಮೈಸೂರು ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆ ಗಳಲ್ಲಿ ಅಗತ್ಯ ದಾಖಲಾತಿ ನೀಡಿ ರೈತ ಬಾಂಧವರು ಮೇವಿನ ಕಿರು ಪೊಟ್ಟಣ ಗಳನ್ನಾ ಪಡೆದುಕೊಳ್ಳಲು ಕರೆ ನೀಡಲಾಯಿತು.