ಮನೆ ರಾಜ್ಯ ಫ್ರಿಡ್ಜ್ ಕಂಪ್ರೆಸ್ಸರ್ ಸ್ಫೋಟ: ಒಂದೇ ಕುಟುಂಬದ ಐವರು ಮೃತ್ಯು

ಫ್ರಿಡ್ಜ್ ಕಂಪ್ರೆಸ್ಸರ್ ಸ್ಫೋಟ: ಒಂದೇ ಕುಟುಂಬದ ಐವರು ಮೃತ್ಯು

0

ಚಂಡೀಗಢ: ಫ್ರಿಡ್ಜ್ ಕಂಪ್ರೆಸ್ಸರ್ ಸ್ಪೋಟಗೊಂಡು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಪಂಜಾಬ್‌ ನ ಜಲಂಧರ್‌ ಅವತಾರ್ ನಗರ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10) ಎಂದು ಗುರುತಿಸಲಾಗಿದೆ.

ಸ್ಫೋಟದ ನಂತರ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರನ್ನು ಜಲಂಧರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, ಅವತಾರ್ ನಗರದ ಮನೆಯೊಂದರಲ್ಲಿ ಫ್ರಿಡ್ಜ್ ಕಂಪ್ರೆಸ್ಸರ್ ಸ್ಫೋಟಗೊಂಡಿರುವ ಕುರಿತು ಮಾಹಿತಿ ಬಂದಿದ್ದು ಕೂಡಲೇ ರಕ್ಷಣಾ ತಂಡ ಹಾಗೂ ಸಿಬಂದಿಗಳ ಜೊತೆ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿ ಐವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆವು ಆದರೆ ಘಟನೆಯಲ್ಲಿ ಯಾರು ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.

ಸ್ಪೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಕಾವೇರಿ ವಿಚಾರದಲ್ಲಿ ನಮ್ಮ ಅಧಿಕಾರಿಗಳು ಸರಿಯಾದ ವಾದ ಮಾಡುವಲ್ಲಿ ವಿಫಲರಾಗಿದ್ದಾರೆ: ಸಂಸದೆ ಸುಮಲತಾ ಅಂಬರೀಶ್
ಮುಂದಿನ ಲೇಖನಮಂಡ್ಯ ಡಿಆರ್ ಪೇದೆ ಮಹದೇಶ್ವರ ಬೆಟ್ಟದ ಖಾಸಗಿ ಲಾಡ್ಜ್‌ ನಲ್ಲಿ ನೇಣಿಗೆ ಶರಣು