ಮನೆ ಅಪರಾಧ ಚಿಕ್ಕಬಳ್ಳಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮರ್ಮಾಂಗಕ್ಕೆ ಹೊಡೆದು ಸ್ನೇಹಿತನ ಕೊಲೆ

ಚಿಕ್ಕಬಳ್ಳಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮರ್ಮಾಂಗಕ್ಕೆ ಹೊಡೆದು ಸ್ನೇಹಿತನ ಕೊಲೆ

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿ ಗ್ರಾಮದಲ್ಲಿ ಅತ್ಯಂತ ಘೋರ ಮತ್ತು ಮನುಷ್ಯತ್ವವಿಲ್ಲದ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಮೋಹನ್ (34) ಎಂದು ಗುರುತಿಸಲಾಗಿದೆ. ಮೂಲತಃ ಅಸ್ಸಾಂ ರಾಜ್ಯದವರಾದ ಮೋಹನ್ ಚಿಕ್ಕಬಳ್ಳಾಪುರದ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಸ್ನೇಹಿತರೊಂದಿಗೆ ಕುಡಿಯುವ ವೇಳೆ ಗಲಾಟೆ ಆರಂಭವಾಗಿ, ಆಕ್ರೋಶಿತಗೊಂಡ ಆರೋಪಿಗಳು ಮೋಹನ್‌ನೊಂದಿಗೆ ಜಗಳಕ್ಕೆ ಇಳಿದರು. ಜಗಳ ತಾರಕಕ್ಕೇರಿ ಆರೋಪಿಗಳು ಮೋಹನ್‌ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾರೆ.

ಘಟನೆ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.