ಮನೆ ಅಪರಾಧ ಟೆಲಿಗ್ರಾಂ ಆಪ್ ಮೂಲಕ ಸ್ನೇಹ: ಗೃಹಿಣಿಗೆ 11.73 ಲಕ್ಷ ರೂ., ಯುವಕನಿಗೆ 2.21 ಲಕ್ಷ ರೂ...

ಟೆಲಿಗ್ರಾಂ ಆಪ್ ಮೂಲಕ ಸ್ನೇಹ: ಗೃಹಿಣಿಗೆ 11.73 ಲಕ್ಷ ರೂ., ಯುವಕನಿಗೆ 2.21 ಲಕ್ಷ ರೂ ವಂಚನೆ

0

ಮೈಸೂರು : ಟೆಲಿಗ್ರಾಂ ಆಪ್ ಮೂಲಕ ಪರಿಚಯವಾದ ವ್ಯಕ್ತಿ ಹಣ ಹೂಡಿಕೆ ಮಾಡಿ ಕೆಲವು ಟಾಸ್ಕ್ ಗಳನ್ನು ಪೂರೈಸಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ 11.73 ಲಕ್ಷ ರೂ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ.

Join Our Whatsapp Group

ಲಕ್ಷ್ಮಿಪುರಂ ನಿವಾಸಿ ಎಸ್.ಎಸ್.ಗೀತಾ (35)  ವಂಚನೆಗೊಳಗಾದ ಮಹಿಳೆ.

ಮತ್ತೊಂದು ಪ್ರಕರಣದಲ್ಲಿ ವಿಜಯನಗರ ಎರಡನೇ ಹಂತದ ಎಂ.ಡಿ.ದೀಪಕ್ (35) ಎಂಬವರಿಗೆ ಟೆಲಿಗ್ರಾಂ ಆಪ್ ನಲ್ಲಿ ಯುವರಾಜ್ ಸಿಂಗ್ ಎಂಬ ಹೆಸರಿನಲ್ಲಿ ಪರಿಚಯವಾದ ವಂಚಕ ಟಾಸ್ಕ್ ಪೂರೈಸಿದರೆ ಲಾಭ ಬರುತ್ತದೆ ಎಂದು ನಂಬಿಸಿ 2,21,261 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ಇವೆರಡೂ ಪ್ರಕರಣಗಳು ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿದೆ.