ಕಾರ್ತಿಕ ಮಾಸದಲ್ಲಿ ಸೂರ್ಯ ಅಥವಾ ಚಂದ್ರಗ್ರಹಣವಾಗೋಣ,ಮೋಡವಿಲ್ಲದೆ ಮಳೆಯಾಗೋಣ, ಭೂಕಂಪ, ನಕ್ಷತ್ರಗಳು ಉದುರೋಣ ದುಶ್ಚಿನ್ನಗಳಾದರೆ ಲಾಭಗಳಿಸಬೇಕೆನ್ನುವ ವ್ಯಾಪಾರಿಗಳು ಈ ಮಾಸದಲ್ಲಿ ಸರ್ವ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟು ಮುಂದೆ ಚೈತ್ರ ಮಾಸದಲ್ಲಿ ಮಾರಿದರೆ ತುಂಬಾ ಲಾಭವಾಗುವುದು.
ಕಾರ್ತಿಕ ಮಾಸದ ಪ್ರತಿಪದೆಯ ದಿನ ಸೂರ್ಯನಿಗೆ ಕಣ ಕಟ್ಟದರೆ, ಎಳ್ಳು ಎಣ್ಣೆಗಳ ಧಾರಣಿಯಲ್ಲಿ ಮಂದಿ ಯಾಗುತ್ತ ನಡೆಯುವದು. ಸಂಗ್ರಹಿಸಿದರೆ ಮೊದಲೇ ಮಾರಿಬಿಡಬೇಕು.ಕಾರ್ತಿಕ ಮಾಸದಲ್ಲಿ ಮೇಘದ ಆರ್ಭಟ ವುಂಟಾಗಿ ಮಳೆಯಾದರೆ ಧಾನ್ಯಗಳ ಧಾರಣೆಯಲ್ಲಿ ಸಮತ್ವ ಉಳಿಯುವುದು.
ಶು.7 ರಂದು ಶನಿವಾರ ಇದ್ದರೆ ಧಾನ್ಯಗಳು ಮಂದಿ, ಬೆಳೆ ವಸ್ತುಗಳು ತೇಜಯು ಬ. ಯಯ13 ರವಿವಾರ ಇದ್ದರೆ ಗೋಧಿ,ಕೆಂಪು ವಸ್ತುಗಳು ತೇಜಿ. ಬಹುಳ 10 ಶನಿವಾರ ಈ ದಿನ ಆಕಾಶದಲ್ಲಿ ಮೋಡ ಕವಿದರೆ ತುಪ್ಪ ಅಡಿಕೆ ತೇಜೀಯು. ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಶನಿವಾರ ಇದ್ದರೆ ಧ್ಯಾನ್ಯ ತೇಜಿಯು. ಬಹುಳ 30 (ಅಮಾವಾಸ್ಯೆ)ರಂದು ಜೇಷ್ಠ ನಕ್ಷತ್ರವಿದ್ದರೆ ನಿತ್ಯೋಪಯೋಗಿ ಧಾನ್ಯಗಳು ಎಣ್ಣೆ ಬೆಣ್ಣೆಗಳೆಲ್ಲವೂ ಮಂದಿಯಲ್ಲಿರುವವು.