ಮನೆ ಸುದ್ದಿ ಜಾಲ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿಯ ಕಾರು ತಡೆದಿದ್ದಕ್ಕೆ ಫುಲ್ ಗರಂ

ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿಯ ಕಾರು ತಡೆದಿದ್ದಕ್ಕೆ ಫುಲ್ ಗರಂ

0

ಹಾಸನ : ಮಾಜಿ ಸಚಿವ ಹೆಚ್.ಡಿ.ರೇವಣ್ಣ ದಂಪತಿ ಹಾಸನಾಂಬೆಯ ದೇವಾಯಲಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದಿದ್ದಾರೆ. ಶಿಷ್ಟಾಚಾರ ಪಾಲನೆ ಅಧಿಕಾರಿಗಳ ಗಮನಕ್ಕೆ ತಾರದೇ ರೇವಣ್ಣ ನೇರವಾಗಿ ದೇಗುಲಕ್ಕೆ ಆಗಮಿಸಿದ್ದಾರೆ.

ಮಾಜಿ ಪ್ರಧಾನಿ ಕುಟುಂಬದ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಹೊಂದಿರುವ ರೇವಣ್ಣ ಅವರು ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತಾ ವ್ಯವಸ್ಥೆಯೊಂದಿಗೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನ ತಡೆದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ.

ಪತ್ನಿ ಭವಾನಿ ರೇವಣ್ಣ ಜೊತೆ ಸಾವಿರ ರೂ. ಟಿಕೆಟ್ ಪಡೆದು ನೇರ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಬ್ಯಾಹ್ಮಿ, ಕೌಮಾರಿ, ಮಹೇಶ್ವರಿ ಮೂರು ದೇವರ ಮೇಲಿದ್ದ ಕುಂಕುಮ ಕೇಳಿ ಪಡೆದ ರೇವಣ್ಣ, ಪ್ರತ್ಯೇಕವಾಗಿ ಬಾಕ್ಸ್ನಲ್ಲಿ ಕುಂಕುಮ, ದೇವರ ಮೇಲಿದ್ದ ಹೂವು ಕೊಂಡೊಯ್ದರು. ಈ ವೇಳೆ ರೇವಣ್ಣ ದಂಪತಿಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಸಾಥ್ ನೀಡಿದ್ದಾರೆ.