ಮನೆ ರಾಜಕೀಯ ಇಂದಿರಾ ಕ್ಯಾಂಟೀನ್’ಗೆ  ಅನುದಾನ ಕಡಿತ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಇಂದಿರಾ ಕ್ಯಾಂಟೀನ್’ಗೆ  ಅನುದಾನ ಕಡಿತ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

0

ಬೆಂಗಳೂರು(Bengaluru): ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡದೆ ಬಿಜೆಪಿ ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕಡಿತಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು ಆಕ್ರೋಶ ಹೊರ ಹಾಕಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಿಗೆ 2017-2018, 2018-19ರಲ್ಲಿ ಕ್ರಮವಾಗಿ ₹100 ಮತ್ತು ₹145 ಕೋಟಿ ಅನುದಾನ ನೀಡಿದ್ದ ಬಿಬಿಎಂಪಿ, ಈ ವರ್ಷ ಕೇವಲ ₹60 ಕೋಟಿ ಕೊಟ್ಟಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. ಕಳಪೆ ದರ್ಜೆಯ ಊಟ, ತಿಂಡಿ ನೀಡಲಾಗುತ್ತಿದೆ ಎಂದು ಜನ ಬರುವುದಿಲ್ಲ ಎಂಬ ನೆಪವೊಡ್ಡಿ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವುದು ಬಿಜೆಪಿ ಸರ್ಕಾರದ ಹುನ್ನಾರವಾಗಿದೆ. ಕ್ಯಾಂಟೀನ್‌ಗಳಿಗೆ ಪ್ರತಿದಿನ ಬರುತ್ತಿದ್ದ 300-400 ಜನರ ಸಂಖ್ಯೆ ಈಗ 50-100ಕ್ಕೆ ಇಳಿದಿದೆಯಂತೆ. ಹಾಗಾದರೇ ಬೆಂಗಳೂರು ನಗರದ ಬಡವರೆಲ್ಲರೂ ಶ್ರೀಮಂತರಾದರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.