ಗಂಡ ಮತ್ತು ಹೆಂಡತಿ ಮಧ್ಯೆ ಜೋರು ಜಗಳ ಆಗುತ್ತೆ. ಗಂಡನಿಗೆ ಸಿಟ್ಟು ಬರುತ್ತೆ. ಅದಕ್ಕೆ ಹೆಂಡತಿ ಕೊಟ್ಟ ಉತ್ತರ ಬಲು ಮಜಾ..!
ಗಂಡ: ನಿನ್ನಂಥ 50 ಜನ ನಂಗೆ ಸಿಕ್ತಾರೆ
ಹೆಂಡತಿ ನಗುತ್ತಾ ಹೇಳ್ತಾಳೆ, “ನಿಮ್ಗೆ ಈಗ್ಲೂ ನನ್ನಂಥ ಹೆಂಡ್ತೀನೇ ಇಷ್ಟ ಪಡ್ತೀರಿ ಅಂತ ಆಯ್ತು”.
ಹೆಂಡತಿ ಉತ್ತರ ಕೇಳಿ ಗಂಡನಿಗೆ ಏನು ಹೇಳಬೇಕೋ ತೋಚದಂಗಾಯ್ತು.
ನಿದ್ರಾಭಂಗ
ಸರಕಾರಿ ಕಚೇರಿಯಲ್ಲಿ ಒಂದು ಫಲಕದಲ್ಲಿ ಹೀಗೆ ಬರೆದಿರುತ್ತೆ: “ದಯವಿಟ್ಟು ಶಬ್ದ ಮಾಡಬೇಡಿ”. ಯಾರೋ ‘ಕಿಡಿಗೇಡಿ’ಗಳು ಅದರ ಕೆಳಗೆ ಹೀಗೆ ಬರೆಯುತ್ತಾರೆ: “ನಮಗೆ ನಿದ್ರೆಯಿಂದ ಎಚ್ಚರವಾಗುತ್ತೆ”.
(ಗಮನಿಸಿ: ಈ ಮೇಲಿನ ಹಾಸ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂಥವು. ಇದರಲ್ಲಿರುವ ಪಾತ್ರಗಳು ನೈಜವಲ್ಲ. ಈ ಹಾಸ್ಯದಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೋರುತ್ತೇವೆ.)