ಮನೆ ರಾಜ್ಯ 2-3 ತಿಂಗಳಲ್ಲಿ ಜಿ.ಪಂ – ತಾ.ಪಂ ಚುನಾವಣೆ : ಸಚಿವ ಶರಣಪ್ರಕಾಶ್ ಪಾಟೀಲ್

2-3 ತಿಂಗಳಲ್ಲಿ ಜಿ.ಪಂ – ತಾ.ಪಂ ಚುನಾವಣೆ : ಸಚಿವ ಶರಣಪ್ರಕಾಶ್ ಪಾಟೀಲ್

0

ಹುಬ್ಬಳ್ಳಿ : ಎರಡು ಅಥವಾ ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ಕಾರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2-3 ತಿಂಗಳಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ನಡೆಯಲಿದ್ದು ಸರ್ಕಾರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಜಿಪಂ, ತಾಪಂ ಜತೆಗೆ 8 ತಿಂಗಳಲ್ಲಿ ಗ್ರಾಪಂ ಮತ್ತು ಪಪಂ ಚುನಾವಣೆ ಸಹ ನಡೆಯುವ ಸಾಧ್ಯತೆ ಇದೆ ಎಂದರು.

ಈ ಹಿಂದಿನ ಸರ್ಕಾರ ಬಹಳಷ್ಟು ಗೊಂದಲ ಸೃಷ್ಟಿಸಿ, ಚುನಾವಣೆಯನ್ನೇ ನಡೆಸಲಿಲ್ಲ. ಅವರಿಗೆ ಚುನಾವಣೆ ನಡೆಸುವ ಇಚ್ಛೆಯೇ ಇರಲಿಲ್ಲ. ನಾವು ಅಧಿಕಾರ ವಿಕೇಂದ್ರೀಕರಣದ ಪರವಾಗಿರುವವರು. ಹಿಂದಿನ ಸರ್ಕಾರ ಮೀಸಲಾತಿಯಲ್ಲಿ ದೊಡ್ಡ ಸಮಸ್ಯೆ ಮಾಡಿದೆ. ಅದೆಲ್ಲವನ್ನು ಇದೀಗ ಸರಿಪಡಿಸಿ ಚುನಾವಣೆ ಮಾಡುತ್ತೇವೆ ಎಂದರು.