ಗದಗ: ಮನೆಯಲ್ಲಿ ಮಲಗಿದ್ದ ವ್ಯಕ್ತಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ.
ಇಮಾಮ್ ಹುಸೇನ್ ಮೃತ ವ್ಯಕ್ತಿ. ಕೆಂಚಪ್ಪ ಕೊಲೆಗೈದ ಆರೋಪಿ.
ಇಮಾಮಾ ಸಾಬ್ ಆಗಾಗ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪತ್ನಿಯೂ ಎರಡು ದಿನಗಳ ಹಿಂದೆ ಊರಿಗೆ ಹೋಗಿದ್ದಾಳೆ. ಆಮೇಲೆ ಆರೋಪಿ ಕೆಂಚಪ್ಪ ಪತ್ನಿ ಕೂಡ ಮನೆಯಿಂದ ಹೋಗಿದ್ದಾಳೆ. ಹೀಗಾಗಿ ನನ್ನ ಪತ್ನಿ ಮನೆಬಿಟ್ಟು ಹೋಗಲು ಈತನೇ ಕಾರಣವೆಂದು ಅನುಮಾನಗೊಂಡ ಕಿರಾತಕ ಕೆಂಚಪ್ಪ ಮೇ 4ರ ರಾತ್ರಿ ಏಕಾಏಕಿ ಇಮಾಮಾ ಸಾಬ್ ಮನೆಗೆ ನುಗ್ಗಿ ಚಾಕುವಿನಿಂದ ಇರಿರು ಪರಾರಿಯಾಗಿದ್ದಾನೆ.
ನೋವಿನಿಂದ ನರಳುತ್ತಿದ್ದ ವ್ಯಕ್ತಿಯನ್ನುಕೂಡಲೇ ಸ್ಥಳೀಯರು, ಪೊಲೀಸರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಿತಿ ಚಿಂತಾಜನಕ ಇದ್ದ ಕಾರಣ ಜಿಮ್ಸ್ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಮೇ.5) ನಸುಕಿನ ಜಾವ ಮೃತ ಪಟ್ಟಿದ್ದಾನೆ.
ತನಿಖೆ ಚುರುಕುಗೊಳಿಸಿದ ಗದಗ ಶಹರ ಪೊಲೀಸ್ ಠಾಣೆ ಪೊಲೀಸರು ಆರೋಪಿ ಕೆಂಚಪ್ಪನನ್ನು ಹೆಡೆಮುರಿ ಕಟ್ಟಿದ್ದಾರೆ