ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಗ್ರಾಮದಲ್ಲಿರುವ ಹೊಳಲಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ.
ದೇವಿಯ 20 ಗ್ರಾಂ ಚಿನ್ನದ ಸರ, ಸುಮಾರು 1ಕೆ.ಜಿ ಬೆಳ್ಳಿ ಕಿರೀಟ ಕದ್ದು, ಕಳ್ಳರು ಪರಾರಿಯಾಗಿದ್ದಾರೆ.
ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಸ್ಥಾನಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಛತ್ರಪತಿ ಶಿವಾಜಿ ಮಹಾರಾಜರು, ಆನೆಗುಂದಿ ಆಳರಸರು, ವಿಜಯನಗರದ ಕೃಷ್ಣದೇವರಾಯರು, ರಣದುಲ್ ಖಾನ ಮುಂತಾದ ಅರಸರು ಇಲ್ಲಿ ರಾಜ್ಯಭಾರ ಮಾಡಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.