ಪಿತ್ತಕೋಶ, ಪಿತ್ತರಸದ ನಾಳಗಳ ನೋವು ಸಾಮಾನ್ಯವಾಗಿ ಹೊಟ್ಟೆಯ ಮೇಲ್ಬಾಗದಲ್ಲಿ ಬರುತ್ತದೆ ಬಲಪಕ್ಕೆಲುಬುಗಳ ಕೆಳಗೆ ಇದು ಇರುತ್ತದೆ. ಈ ನೋವು ಕ್ರಮೇಣ ಬಲ ಭುಜದವರೆಗೂ ವ್ಯಾಪಿಸುತ್ತದೆ ನೋವು ಬಂದಾಗ ಹೊಟ್ಟೆಯಲ್ಲಿ ವಿಕಾರವಾಗುತ್ತದೆ, ವಾಂತಿಯಾಗುತ್ತದೆ.
ಈ ಕಲ್ಲುಗಳು ಪಿತ್ತಕೋಶದಲ್ಲಿದ್ದಾಗ, ಈ ನೋವು ಹೆಚ್ಚಿರುವುದಿಲ್ಲ. ಅದು ನಾಳಗಳಿಗೆ ಬಂದಾಗ ತೀವ್ರತೆ ಹೆಚ್ಚು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅದರಲ್ಲಿ ಹೆಚ್ಚು ಹೆರಿಗೆಯಾಗಿರುವವರಿಗೆ ಹೆಚ್ಚಾಗಿರುತ್ತದೆ.
ಆಹಾರ ಸೇವಿಸಿದ ಕೂಡಲೇ ಇದು ಬರುತ್ತದೆ. ಸೇವಿಸಿದ ಆಹಾರಕ್ಕೆ ಜೀರ್ಣಾವಸ್ಥೆಗೆ ಪಿತ್ತರಸ ಅಗತ್ಯವಾಗಿ ಬೇಕಾಗುತ್ತದೆ. ಎಷ್ಟು ಹೆಚ್ಚಾಗಿ ಆಹಾರ ಸೇವಿಸಿದರೂ ಅಷ್ಟು ಹೆಚ್ಚಾಗಿ ಪಿತ್ತರಸದ ಅವಶ್ಯಕತೆ ಇರುತ್ತದೆ ವ್ಯಕ್ತಿಯು ಹೆಚ್ಚು ವಿರಾಮದ ನಂತರ ಸೇವಿಸಿದಾಗ ಈ ಲಕ್ಷಣಗಳು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ಸಾಮಾನ್ಯವಾಗಿ 1-5 ಗಂಟೆಗಳವರೆಗೆ ನೋವು ಇರುತ್ತದೆ.
ಆಹಾರದ ನಂತರ ಸ್ಥಿರವಾಗಿ ನೋವು ನ ಇದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಹೊಟ್ಟೆಯ ಜಠರ, ಪಿತ್ತ
ಪರೀಕ್ಷಿಸುವುದು ಉತ್ತಮ. ಇದಕ್ಕಾಗಿ ಅಸೌಂಡ್ಲ್ಲ ಪರೀಕ್ಷೆ ಕಡ್ಡಾಯ.
ಪಿತ್ತಕೋಶದ ಕಲ್ಲುಗಳು ಏರ್ಪಡ ದಿರಬೇಕೆಂದರೆ ಮೊದಲು ಹೆಚ್ಚು ಜಿಡ್ಡಿನ ಅಂಶ, ಕೊಬ್ಬಿನ, ಮೇದಸ್ಸು ಹೆಚ್ಚಿಗೆ ಇರುವಂತ ಆಹಾರವನ್ನು ಪೂರ್ಣ ವಾಗಿ ಬಿಡಬೇಕು. ಕಲ್ಲುಗಳಿಂದ ನಿರಂತರ ನೋವು ಬರುತ್ತಿದ್ದರೆ ಸರ್ಜರಿಯ ಮೂಲಕ ನಿರ್ಮೂಲನೆ ಮಾಡುವುದು ಕ್ಷೇಮ ಕೆಲವು ಔಷಧಿಗಳಿಂದ ಕಲ್ಲನ್ನು ಕರಗಿಸಬಹುದು. ಆದರೆ ಸಮಯಾವಕಾಶ ಬೇಕಾಗುತ್ತದೆ. ದೀರ್ಘಕಾಲದ ಮಾತ್ರೆಯಿಂದ ಕೆಲವು ಸಲ ಅಲರ್ಜಿಗಳಾಗುತ್ತದೆ. ಈ ರೀತಿಯ ಕಲ್ಲು ಉತ್ಪತ್ತಿಯನ್ನು ತಡೆಯಲು ನಮ್ಮ ಆಹಾರ ಪದ್ಧತಿ ಮತ್ತು ಆಯುರ್ವೇದದ ಚಿಕಿತ್ಸೆಗಳು ಇವೆ. ಆದರೆ ಅಪಾಯದ ಮಟ್ಟ ಮೀರಿದರೆ ಕಷ್ಟಕರ.
ಕಾಮಾಲೆ ಆದಾಗ ರೋಗಿಗಳಿಗೆ ಸಾಕಷ್ಟು ವಿಶ್ರಾಂತಿ ಅವಶ್ಯ. ಆದರೆ ದೈನಂದಿನ ನಿತ್ಯಕರ್ಮಗಳಿಗೆ ಅಡ್ಡಿಯಿಲ್ಲ. ಸದಾ ಹಾಸಿಗೆಯಲ್ಲಿಯೇ ಮಲಗಿರಬೇಕಾದ ಆವಶ್ಯಕತೆಯಿಲ್ಲ ಆದರೆ ಕಾಮಾಲೆ ತೀವ್ರವಾದಲ್ಲಿ ಆಸ್ಪತ್ರೆಗೆ ದಾಖಲಾಗಿ ಪೂರ್ಣ ವಿಶ್ರಾಂತಿ ಅವಶ್ಯಕ. ನಾವು ಸೇವಿಸುವ ಆಹಾರ ಪೂರ್ಣವಾಗಿ ಜೀರ್ಣ ಆಗುವಂತಿರಬೇಕು. ಅದರಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರಬೇಕು. ಆದ್ದರಿಂದ ಕರಿದ, ಸಿಹಿಯಾದ, ಖಾರದ, ಮಾಂಸದ ಆಹಾರ ಸೇವನೆ ಸೂಕ್ತವಲ್ಲ ಹಣ್ಣು-ತರಕಾರಿ ಸೂಕ್ತ.
ಎಲ್ಲ ವಿಧವಾದ ಯಕೃತ್ ವ್ಯಾಧಿಗಳಿಗೆ ಲಿವರ್ 52 ಡಿ.ಎಸ್’ ಮಾತ್ರೆ ಅಥವಾ ಸಿರಪ್ ಸೂಕ್ತ ಮತ್ತು ಬಿಕಾಂಪ್ಲೆಕ್ಸ್ ಮತ್ತು ವಿಟಾಮಿನ್ ‘ಸಿ’ ಮಾತ್ರೆಗಳು ಸೂಕ್ತವಾಗಿ ಯಕೃತ್ತಿನ ಸಮಸ್ಯೆಯನ್ನು ನಿವಾರಿಸುತ್ತದೆಂದು ಅನುಭವಿ ವೈದ್ಯರ ಅಭಿಪ್ರಾಯ. ಮಕ್ಕಳು ಹಸಿವೆಯಿಲ್ಲದೆ ತೊಂದರೆ ಪಟ್ಟು ಬಲಹೀನ ರಾದರೆ ಅವರಿಗೆ ಯಕೃತ್ತು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸದಿದ್ದಾಗ ಈ ಮಾತ್ರೆ ಅಥವಾ ಸಿರಪ್ ಸೂಕ್ತವಾಗಿರುತ್ತದೆ.
ಪಾಟಿಲಿವರ್— ಹೊಟ್ಟೆಯಲ್ಲಿ ಈ ಲಿವರ್ ಬಲಭಾಗದಲ್ಲಿರುತ್ತದೆ. ನಾವು ತೆಗೆದುಕೊಳ್ಳುವ ನಿತ್ಯದ ಆಹಾರದಲ್ಲಿ ಪೌಷ್ಠಿಕಾಂಶ, ಸಕ್ಕರೆ, ಕೊಬ್ಬಿನಾಂಶ ಇತರ ಅಂಶಗಳಿಂದ ಕೂಡಿರುತ್ತದೆ. ನಮಗೆ ಹೆಚ್ಚಾದ ಈ ಅಂಶಗಳು ಲಿವರ್ (ಯಕೃತ್) ನಲ್ಲಿ ಶೇಖರವಾಗುತ್ತದೆ. ಅದರಲ್ಲಿ ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸಿ, ಉಳಿದೆಲ್ಲಾ ಕೊಬ್ಬು ಇತರ ಆಹಾರ ಪದಾರ್ಥಗಳು ಈರುವರ್‌ನಲ್ಲಿ ಕೊಬ್ಬನ ರೂಪದಲ್ಲಿ ಶೇಖರವಾಗುತ್ತದೆ. ಇದರ ಒತ್ತಡ ಹೆಚ್ಚಿದಂತೆಲ್ಲಾ ಈ ಲಿವರ್ ಕಣಗಳ ಮೇಲೆ ಪ್ರಭಾವ ಬೀರಿ, ಅವರ ಗುಣಗಳನ್ನು ಕಳೆದುಕೊಳ್ಳುತ್ತದೆ. ಅಲ್ಲದೆ, ಈ ಕೊಬ್ಬು ರಾಶಿಯಾಗಿ ಲಿವರ್ ಗಾತ್ರದಲ್ಲಿ ಹೆಚ್ಚಾಗುತ್ತದೆ ಇದನ್ನು ಪ್ಯಾಟಲಿವರ್’ ಎನ್ನುತ್ತಾರೆ.
ಇದರಲ್ಲಿ ಮೂರು ಅಂಗಗಳಿರುತ್ತವೆ. ಮೊದಲ ಅಂಗ ಲಿವರ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಕೊಟ್ಟು ಸೇರುತ್ತದೆ. ಎರಡನೇ ಅಂಗದಲ್ಲಿ ಸ್ಥಲ ಹೊತ್ತು ಪ್ರಮಾಣದಲ್ಲಿ ಕೊಟ್ಟು ಸೇರಿ, ಲಿವರ್ ಗಾಯಗೊಳ್ಳುತ್ತದೆ. ಆಲ್ಪ ಪ್ರಮಾಣದಲ್ಲಿ ಲಿವರ್ ಕಿಣ್ವಗಳು ನಾಶವಾಗುತ್ತದೆ. ಮೂರನೇ ಅಂಗದಲ್ಲಿ ಲಿವರ್ ನಲ್ಲಿ ಸಿರೋಟಿಸ್ ಉಂಟಾಗಿ, ಲಿವರ್ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಲಿವರ್ ಬದಲಾವಣೆಯ ಹೊರತು, ಅನ್ಯಮಾರ್ಗವಿಲ್ಲದಂತಾಗುತ್ತದೆ.
ಈ ಪ್ಯಾಟಿಲಿವರ್ ಬಂದನಂತರ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಲಿವರ್ ಸಿರೋಸ್ ಆಥವಾ ಲಿವರ್ ಕ್ಯಾನ್ಸರ್ ಆಗುವ ಸಂಭವ ಮೊದಲ ಹಂತವಿದೆಂದು ಅಲಕ್ಷಿಸಬಾರದು. ಅದು ನೇರವಾಗಿ ಮೂರನೇ ಹಂತಕ್ಕೆ ಹೋಗುವ ಅವಕಾಶವಿದೆ.
ಪರೀಕ್ಷೆಗಳು
★* ಅಲ್ಟಾಸೌಂಡ್ ಆಟ್ಟಾಮಿನ್ ಸ್ಕ್ಯಾನಿಂಗ್ ನಿಂದ ಬಹುದುಟ್ಟಿಗೆ ತಿಳಿಯುತ್ತದೆ
★* ಲಿವರ್ ಫಂಕ್ಷನ್ ಪರೀಕ್ಷೆ ಮಾಡಿದಾಗ ಯಾವುದಾದರೂ ಇಂಜೈಮಿನ್ (ಹಾರ್ಮೋನ್) ಸ್ರವಿಸುವುದರಿಂದ ಲಿವರ್ ಡ್ಯಾಮೇಜ್ ವಿಷಯ ತಿಳಿಯುತ್ತದೆ.
★* ಮಧುಮೇಹ, ಕೊಲೆಸ್ಟ್ರಾಲ್ ಹಂತವನ್ನು ತಿಳಿಯಬೇಕು. ಕ್ಯಾನ್ಸರ್ ತಿಳಿಯಲು ಲಿವರ್ ಬಯಾಪ್ಪಿ ಅಗತ್ಯವಿರುತ್ತದೆ.
ಎಚ್ಚರಿಕೆಗಳು
ತೂಕ ಹೆಚ್ಚಿದಂತೆಲ್ಲಾ ಲಿವರ್ ಗೆ ತೊಂದರೆಯಾಗುತ್ತದೆಂದು ಅಧ್ಯಯನದಿಂದ ದೃಢಪಟ್ಟಿದೆ.
★* ಸ್ಕೂಲಕಾಯದಲ್ಲಿ ಶೇಕಡ 90% ಮಂದಿಗೆ ಮೊದಲ ಹಂತ, ಶೇಕಡ 20% ರಷ್ಟು ಎರಡನೇ
ಹಂತ
★* ಮಧುಮೇಹದವರಲ್ಲಿ ಶೇಕಡ 50% ರಷ್ಟು ಮಂದಿಯು ಪ್ಯಾಟಿಲಿವರ್ ಹೊಂದಿರುತ್ತಾರೆ.
★* ಸಿರೋಸಿಸ್ ಬಂದವರಲ್ಲಿ ಶೇಕಡ 95% ರಷ್ಟು ಮಂದಿ ಮಧುಮೇಹ ಸ್ಫೂಲಕಾಯರಾಗಿರುತ್ತಾರೆ.
ಆರೋಗ್ಯಕರವಾದ ಆಹಾರ
ನಾವು ತೆಗೆದುಕೊಳ್ಳುವ ಆಹಾರದಲ್ಲಿ ತಪ್ಪದೆ ತರಕಾರಿ, ಹಣ್ಣುಗಳನ್ನು ತೆಗೆದುಕೊಳ್ಳಬೇಕು. ತುಪ್ಪದಿಂದ ದೂರವಿರಿ, ಮೀನು, ಆಲೀವ್ ಎಣ್ಣೆಯನ್ನು ಬಳಸಬೇಕು. ಪಾಲಿಶ್ ಮಾಡದ ಅಕ್ಕಿ, ಗೋಧಿ ಹೆಚ್ಚು ಬಳಸಿ.
ವ್ಯಾಯಾಮ
ಪ್ರತಿದಿನ ಕನಿಷ್ಟ ಪಕ್ಷ 30 ನಿಮಿಷವಾದರೂ ಮಾಡಬೇಕು. ಮೆಟ್ಟಿಲು ಹತ್ತುವುದು, ಮಧುಮೇಹ ಅಂಕಿಯಲ್ಲಿರಬೇಕು ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬೇಕು. ಮಧ್ಯಪಾನದಿಂದ ದೂರವಿರಬೇಕು.