ಮನೆ ರಾಜ್ಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ: ನಾಳೆ ಸಭೆ ನಡೆಸಿ ಮುಂದಿನ ತೀರ್ಮಾನ; ಸಿಎಂ ಬೊಮ್ಮಾಯಿ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ: ನಾಳೆ ಸಭೆ ನಡೆಸಿ ಮುಂದಿನ ತೀರ್ಮಾನ; ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru): ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪು ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಕಂದಾಯ ಸಚಿವರು, ಅಡ್ವಕೇಟ್ ಜನರಲ್‌ ಜೊತೆ ಸಭೆ ಮಾಡಿ ಕಾನೂನು ಸುವ್ಯವಸ್ಥೆ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದರು.

ಬಹುಜನರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇವೆ ಎಂದ ಬೊಮ್ಮಾಯಿ ಅವರುಮ ಹುಬ್ಬಳ್ಳಿಯಲ್ಲಿ ಗಣೇಶ ಆಚರಣೆಯನ್ನು ಸಮಿತಿ ನೇತೃತ್ವದಲ್ಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಫಾಲೋ ಮಾಡಬೇಕು. ಈ ನಿಟ್ಟಿನಲ್ಲಿ ಯಾರ ನೇತೃತ್ವದಲ್ಲಿ ಹಬ್ಬ ಆಚರಣೆ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದರು.

ಕಂದಾಯ ಸಚಿವ ಆರ್.ಅಶೋಕ್‌ ಅವರು ಮಾತನಾಡಿ, ಕೋರ್ಟ್ ತೀರ್ಪು ಸಂತೋಷ ತಂದಿದೆ. ಇದು ಬಹು ಧರ್ಮೀಯರ ದೇಶ. ನಿನ್ನೆ ಸ್ವಲ್ಪ ಬೇಸರ ಆಗಿತ್ತು. ಕಂದಾಯ ಭೂಮಿ ಅಲ್ಲ ಎಂದಿದ್ದಕ್ಕೆ ಬೇಸರ ಆಗಿತ್ತು. ಕಂದಾಯ ಇಲಾಖೆಗೆ ಈ ಜಾಗ ಸೇರಿದ್ದು ಎಂದು ತಿಳಿದು ಖುಷಿ ಆಗಿದೆ. ಒಳ್ಳೆಯ ತೀರ್ಪು ಎಂದರು.

ಅರ್ಜಿ ಪರಿಶೀಲನೆ ಮಾಡಬಹುದು ಎಂದು ಕೋರ್ಟ್ ಹೇಳಿದೆ ಅದಕ್ಕಾಗಿ ಕಂದಾಯ ಇಲಾಖೆಗೆ ಅವಕಾಶ ನೀಡಿದೆ. ತೀರ್ಪಿನ ಪೂರ್ತಿ ಮಾಹಿತಿ ಓದಿದ ಬಳಿಕ ಸರ್ಕಾರ ನಿರ್ಧಾರ ಪ್ರಕಟ ಮಾಡಲಿದೆ. ಅದಕ್ಕೂ ಮುನ್ನ ಸಿಎಂ ಜೊತೆ ಮತ್ತು ಅಡ್ವಕೇಟ್ ಜನರಲ್ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು, ಎಂಬುವುದು ಸ್ಪಷ್ಟ ಆಗಿದೆ. ಮುಂಬರುವ ದಿನಗಳಲ್ಲಿ ಕನ್ನಡ ರಾಜ್ಯೋತ್ಸವವನ್ನೂ ಅದ್ಧೂರಿಯಾಗಿ ಮಾಡ್ತೇವೆ ಎಂದರು.

ಹಿಂದಿನ ಲೇಖನಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ
ಮುಂದಿನ ಲೇಖನ​ಸಾಡೇಸಾತಿ ಶನಿ ಮಂತ್ರ