ಮನೆ ಅಪರಾಧ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ  ಬಂಧನ

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ  ಬಂಧನ

0

Join Our Whatsapp Group

ವಿಶಾಖಪಟ್ಟಣಂ( ಆಂಧ್ರಪ್ರದೇಶ): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದ್ದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ, ಮತ್ತೊಮ್ಮೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಅಟೆಂಡರ್ ಸತ್ಯರಾವ್ ಮತ್ತು ಆತನ ನಾಲ್ವರು ಸ್ನೇಹಿತರನ್ನು ಬಂಧಿಸಲಾಗಿದೆ.

ಸಂತ್ರಸ್ತೆ ತಂದೆ ನೌಕಾಪಡೆಯ ಉದ್ಯೋಗಿಯಾಗಿದ್ದು, ಇಲ್ಲಿನ ಅಪಾರ್ಟ್ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಆರೋಪಿ ಸತ್ಯರಾವ್ ಕೂಡ ಅದೇ ಕಟ್ಟಡದಲ್ಲಿ ಉಳಿದುಕೊಂಡಿದ್ದ. ಸತ್ಯರಾವ್ ಕೆಲ ದಿನಗಳಿಂದ ಬಾಲಕಿಯ ಸ್ನೇಹ ಬೆಳೆಸಿಕೊಂಡು ಅತ್ಯಾಚಾರ ನಡೆಸಿದ್ದಾನೆ.

ಆಕೆಯ ವಿಡಿಯೋ ಮಾಡಿ, ಫೋಟೋ ತೆಗೆದುಕೊಂಡು  ಇದಾದ ಬಳಿಕವೂ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ, ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಷಯ ಬಾಯ್ಬಿಟ್ಟರೆ, ವಿಡಿಯೋ, ಚಿತ್ರಗಳನ್ನು ಸಾಮಾಜಿಕ ಜಾಲತಾಣದ್ದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಾಲಕಿ ಯಾರಿಗೂ ತನ್ನ ಮೇಲಾದ  ದೌರ್ಜನ್ಯದ ಬಗ್ಗೆ ಹೇಳಿಕೊಂಡಿರಲಿಲ್ಲ.

ಬಾಲಕಿಯು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾಳೆ, ಶೈಕ್ಷಣಿಕವಾಗಿಯೂ ಹಿನ್ನಡೆ ಅನುಭವಿಸಿದ್ದಾಳೆ .ಈ ವಿಷಯವಾಗಿ  ಶಾಲೆಯ ಪ್ರಾಂಶುಪಾಲರು ಪೋಷಕರಿಗೆ ದೂರು ನೀಡಿದ್ದಾರೆ. ಆಗ ತಾಯಿ ಬಾಲಕಿಯನ್ನು ವಿಚಾರಿಸಿದಾಗ ತನಗೆ ಆದ ದೌರ್ಜನ್ಯದ ಬಗ್ಗೆ ತಾಯಿಗೆ ವಿವರಿಸಿದ್ದಾಳೆ.

ಪೋಷಕರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಆರೋಪಿ ಸತ್ಯರಾವ್ ಮೇಲೆ ದೂರು ನೀಡಿದ್ದಾರೆ. ಬಾಲಕಿಯನ್ನು ಕೆ ಜಿ ಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.  ಆಕೆ ನೀಡಿದ ಹೇಳಿಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು,  ಸತ್ಯರಾವ್ ಮತ್ತು ಆತನ ನಾಲ್ವರು ಸ್ನೇಹಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.