ಮನೆ ರಾಷ್ಟ್ರೀಯ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ:  7 ಮಕ್ಕಳು ಸೇರಿದಂತೆ 15 ಮಂದಿ ಸಾವು

ಗಂಗಾಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ:  7 ಮಕ್ಕಳು ಸೇರಿದಂತೆ 15 ಮಂದಿ ಸಾವು

0

ಕಾಸ್‌ ಗಂಜ್ (ಉತ್ತರಪ್ರದೇಶ): ಉತ್ತರಪ್ರದೇಶದ ಕಾಸ್‌ ಗಂಜ್‌ ನಲ್ಲಿ ಹುಣ್ಣಿಮೆಯ ನಿಮಿತ್ತ ಗಂಗಾಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಹೊಂಡದಲ್ಲಿ ಬಿದ್ದ ಪರಿಣಾಮ ಟ್ರ್ಯಾಕ್ಟರ್​ ನ ಟ್ರಾಲಿಯಲ್ಲಿ 7 ಮಕ್ಕಳು ಹಾಗೂ 8 ಮಹಿಳೆಯರು ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್ ​ನಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು. ಹೊಂಡದಲ್ಲಿ ಬಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ. ಈ ವೇಳೆ ಟ್ರಾಲಿಯಲ್ಲಿದ್ದ ಕೆಲವರು ಈಜಿಕೊಂಡು ಬಂದು ದಡ ಸೇರಿದ್ದಾರೆ.

ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಷ್ಟರಲ್ಲಾಗಲೇ ಅಪಘಾತದಲ್ಲಿ 7 ಮಕ್ಕಳು ಮತ್ತು 8 ಮಹಿಳೆಯರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೇ ಉಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಕೊಟ್ವಾಲಿ ಪ್ರದೇಶದ ದರಿಯಾವ್ಗಂಜ್ ಪಟಿಯಾಲಿ ರಸ್ತೆಯ ನಡುವೆ ಇರುವ ಗಧೈಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಇಟಾಹ್ ಜಿಲ್ಲೆಯ ಜೈತ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೆ ಕಾಸ್ ಗ್ರಾಮದಲ್ಲಿ ವಾಸಿಸುವ ಜನರು ಹುಣ್ಣಿಮೆಯ ದಿನದಂದು ಗಂಗಾ ಸ್ನಾನ ಮಾಡಲು ಕಾಸ್ ಗಂಜ್‌ ನ ಪಟಿಯಾಲಿ ತಹಸೀಲ್ ಪ್ರದೇಶದ ಕದರ್‌ ಗಂಜ್ ಗಂಗಾ ಘಾಟ್‌ ಗೆ ಹೋಗುತ್ತಿದ್ದರು.

ನಂತರ, ದರಿಯಾವ್‌ ಗಂಜ್ ಪ್ರದೇಶದ ಗಾಧಿಯಾ ಗ್ರಾಮದ ಬಳಿ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ, ಟ್ರ್ಯಾಕ್ಟರ್​ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಹೊಂಡಕ್ಕೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.