ಮನೆ ಅಪರಾಧ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ದಂಧೆ: ಇಬ್ಬರ ಬಂಧನ

ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ದಂಧೆ: ಇಬ್ಬರ ಬಂಧನ

0

ರಾಯಚೂರು: ನಗರದಲ್ಲಿ ಗಾಂಜಾ ಮಿಶ್ರಿತ ಚಾಕೊಲೆಟ್ ಮಾರಾಟ ದಂಧೆಯನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Join Our Whatsapp Group

30, 50, 100 ರೂ. ಗೆ ಗಾಂಜಾ ಚಾಕೊಲೇಟ್ (ಮಿಠಾಯಿ) ಮಾರಲಾಗುತ್ತಿತ್ತು. 6 ಗ್ರಾಂ. ತೂಕದ ಗಾಂಜಾ ಮಿಶ್ರಿತ ಚಾಕೊಲೇಟ್ ಅಂಗಡಿಗಳಲ್ಲೆ ಮಾರಲಾಗುತ್ತಿತ್ತು. ಉತ್ತರಪ್ರದೇಶದಲ್ಲಿ ತಯಾರಿಸಿದ ಚಾಕೊಲೇಟ್ ಗಳು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಗಳಾದ ರಾಚಯ್ಯ ಸ್ವಾಮಿ, ಅಂಬರಯ್ಯನನ್ನು ವಶಕ್ಕೆ ಪಡೆದು ಒಟ್ಟು 482 ಗಾಂಜಾ ಚಾಕೋಲೇಟ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ನಗರದ ಎಲ್.ಬಿ.ಎಸ್ ನಗರ ಬಡಾವಣೆ ಮತ್ತು ಕೈಗಾರಿಕಾ ಪ್ರದೇಶದ ಏರಿಯಾಗಳಲ್ಲಿ ಈ ದಂಧೆ ಜೋರಾಗಿತ್ತು. ದಾಳಿ ವೇಳೆ ಪಾನಾ ಮುನಾಕಾ, ಆನಂದ ಮುನಾಕಾ ಚಾಕೊಲೇಟ್ ಪತ್ತೆಯಾಗಿವೆ. ಬಂಧಿತರಿಂದ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆಹಾಕಿದ ಅಬಕಾರಿ ಪೊಲೀಸರು ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಿಂದಿನ ಲೇಖನ‘ನಗರಾಡಳಿತ’ ವಿಷಯ ಕುರಿತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ತರಬೇತಿ ಕಾರ್ಯಗಾರ
ಮುಂದಿನ ಲೇಖನಬೆಂಗಳೂರು: ಪತ್ನಿಯನ್ನು ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ