ಮನೆ ಅಪರಾಧ ಮಂಡ್ಯದಲ್ಲಿ ಗಾಂಜಾ ಗಿಡ ಪತ್ತೆ: ವಶಕ್ಕೆ ಪಡೆದ ಅಬಕಾರಿ ಪೊಲೀಸರು

ಮಂಡ್ಯದಲ್ಲಿ ಗಾಂಜಾ ಗಿಡ ಪತ್ತೆ: ವಶಕ್ಕೆ ಪಡೆದ ಅಬಕಾರಿ ಪೊಲೀಸರು

0

ಮಂಡ್ಯ: ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವುದು ಪತ್ತೆಯಾಗಿದೆ.

Join Our Whatsapp Group


ನಗರದ ಜಿಲ್ಲಾ ಭೂ ದಾಖಲೆ ನೌಕಕರ ಸಂಘದ ಆವರಣದಲ್ಲಿ ಎರಡು ಗಾಂಜಾ ಗಿಡ ಬೆಳೆದಿರುವುದನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.


ಒಂದು ಗಿಡ 3 ಮೀಟರ್ ಇದ್ದರೆ ಮತ್ತೊಂದು ಗಿಡ 1.9 ಮೀ ಉದ್ದ ಇದ್ದು, ಎರಡು ಗಿಡಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕಾರ್ಯಾಚರಣೆ ನಡೆಸಿದ ಅಬಕಾರಿ ನಿರೀಕ್ಷಕಿ ವನಿತಾ.ಜಿ.ಸಿ ಮಾತನಾಡಿ ಯಲಿಯೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಡ್ಯ ನಗರದ ಜಿಲ್ಲಾ ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ದೊರೆತ ನಂತರ ನ್ಯಾಯಾಲಯದಿಂದ ವಾರೆಂಟ್ ಪಡೆದು, ಸರ್ಕಾರಿ ಆಸ್ತಿಯೊ, ಖಾಸಗಿ ಆಸ್ತಿಯೋ ಎಂಬ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕಂದಾಯ ಇಲಾಖೆ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿದಾಗ ಅಕ್ರಮವಾಗಿ ಎರಡು ಗಾಂಜಾ ಗಿಡಗಳನ್ನು ಬೆಳೆದಿರುವುದು ಪತ್ತೆಯಾಗಿದೆ, ಈ ಬಗ್ಗೆ ತನಿಖೆ ನಡೆದಿದ್ದು ಆರೋಪಿಗಳ ಪತ್ತೆ ಕಾರ್ಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.


ಅಬಕಾರಿ ಇಲಾಖೆ ಮಂಡ್ಯ ವಲಯ ಉಪ ನಿರೀಕ್ಷಕರ ರವಿಕುಮಾರ್.ಕೆ, ಸಿಬ್ಬಂದಿಗಳಾದ ಹರೀಶ್,ಸುರೇಶ್,ಯಶವಂತ್, ಅನಿಲ್ ಕುಮಾರ್,ಕಂದಾಯ ಇಲಾಖೆಯ ತೇಜಸ್,ಅಪ್ಸರ್ ಪಾಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.