ಮನೆ ಯೋಗಾಸನ ಗರುಡಾಸನ

ಗರುಡಾಸನ

0

ಈ ಆಸನಕ್ಕೆ ವೃಕ್ಷಾಸನ ಎಂಬ ಹೆಸರು ಸಹ ಬಳಕೆಯಲ್ಲಿದ್ದರೂ, ಹೆಚ್ಚು  ಪ್ರಚಲಿತವಿರುವುದು ‘ಗರುಡಾಸನ’ ಎಂಬುದೇ.

Join Our Whatsapp Group

ಮಾಡು ಕ್ರಮ

1)    ಮೊದಲು ಯೋಗಾಭ್ಯಾಸಿಯೂ ಭೂಮಿಗೆ ಲಂಬವಾಗಿ, ಎರಡೂ ಕಾಲುಗಳ ಮೇಲೆ ಸಮವಾಗಿ ಭಾರ ಹಾಕಿ ನಿಂತುಕೊಳ್ಳಬೇಕು.

2)   ಅನಂತರ ಬಳ್ಳಿ ಮರವನ್ನು ಸುತ್ತುವಂತೆ, ಉದಾ: ಎಡಗಾಲನ್ನು ಬಲಗಾಲಿನ ಮಂಡಿಯ ಮೇಲೆ ತಂದು ಬಲಗಾಲನ್ನು ಸುತ್ತಿಸಿ ಬಲಪಾದದ ಮೇಲೆ ಎಡಪಾದವನ್ನು ಇಡಲು ಪ್ರಯತ್ನಿಸಬೇಕು.

3)  ಇದೇ ರೀತಿ ಬಲ ಮೊಣಕೈ ಕೆಳಗೆ ಎಡಮೊಣಕೈ ತಂದು ಅನಂತರ ಬಲಗೈಯನ್ನು ಸುತ್ತಿಸಿ, ಎರಡೂ ಅಂಗೈಗಳು ಪರಸ್ಪರ ಜೋಡಿಸಬೇಕು. ಈ ಸ್ಥಿತಿಯಲ್ಲಿ ದೇಹವು ಸಾಧ್ಯವಾದಷ್ಟೂ ಭೂಮಿಗೆ ಲಂಬವಾಗಿರಬೇಕು. ಅನಂತರ ಚಿತ್ರದಲ್ಲಿರುವ ಸ್ಥಿತಿಯನ್ನು ಒಮ್ಮೆ ತಲುಪಿದಾಗ, ಅದೇ ಸ್ಥಿತಿಯಲ್ಲಿ ಸಮತೋಲನ ಪಡೆದು, ನಿಧಾನವಾಗಿ ಕಾಲು ಕೈಗಳನ್ನು ಬದಲಾಯಿಸಬಹುದು.

ಲಾಭಗಳು:

ಈ ಆಸನದ ಅಭ್ಯಾಸದಿಂದ ಮೊಣಕಾಲುಗಳಲ್ಲಿನ ದೋಷ ನಿವಾರಣೆಯಾಗುವುದು. ಕೈ- ಕಾಲುಗಳಲ್ಲಿನ ನರಗಳಿಗೆ ಬಲ ಬರುವುದು. ಅಂಡಕೋಶದ ನ್ಯೂನತೆಯು ಸರಿ ಹೊಂದುವುದು.